ಇಂಡಿ : ಮೇ 8 ರಂದು ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲಾಗುವದು. ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಜಯಂತಿ ಆಚರಣೆ ಮಾಡಬೇಕು ಎಂದು ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಉಪ್ಪಾರ ಸಮಾಜದ ಚಿಂತನ ಮಂತನ ಕಾರ್ಯಕ್ರಮದಲ್ಲಿ ಭಗೀರಥ ಪೀಠ ಹೊಸದುರ್ಗದ ಸ್ವಾಮಿಗಳು ಪುರುಷೋತ್ತಮಾನಂದಪುರಿ ಹೇಳಿದರು.
ಈಗಾಗಲೇ ಭಗೀರಥ ಮಹರ್ಷಿಗಳ ಜಯಂತಿಯನ್ನು ಸರ್ಕಾರವೇ ಆಚರಣೆ ಮಾಡುತ್ತಿತ್ತು. ಕಳೆದೆರಡು ವರ್ಷಗಳಲ್ಲಿ ಕರೋನಾ ಹಿನ್ನಲೆಯಲ್ಲಿ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಣೆ ಮಾಡಿರಲಿಲ್ಲ. ಸರ್ಕಾರ ಕೂಡಲೇ ಸಮಾಜದ ಸಂಘಟನೆಗಳ ಮುಖಂಡರ ಜೊತೆ ಪೂರ್ವಭಾವಿ ಸಭೆ ನಡೆಸಬೇಕು. ಇನ್ನು ಉಪ್ಪಾರ ಅಭಿವೃಧ್ಧಿ ನಿಗಮಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಸಮಾಜದ ಅಭಿವೃಧ್ಧಿಗೆ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ ಅನುದಾನ ನೀಡಲು ಮನವಿ ಮಾಡಲಾಗಿದೆ. ಎಲ್ಲರೂ ಭಕ್ತಿ ಶ್ರೆದ್ದೆಯಿಂದ ಜಯಂತಿ ಆಚರಣೆ ಮಾಡಬೇಕು.
ಈ ವೇಳೆ ತಾಲ್ಲೂಕು ಪಂಚಾಯತ ಮಾಜಿ ಉಪಾಧ್ಯಕ್ಷ ಸೋಮಶೇಖರ್ ಬ್ಯಾಳಿ, ತಾಲೂಕು ಅಧ್ಯಕ್ಷ ಸುರೇಶ್ ಕರಂಡೆ ಶ್ರೀ ಭಗೀರಥ ಮಹರ್ಷಿ ಸಮಾಜ ಸೇವಾ ಸಂಘ, ಬಿಜೆಪಿಯ ಯುವ ಮುಖಂಡ ದಯಾನಂದ್ ಹುಬ್ಬಳ್ಳಿ,
ತಾಲೂಕ ಹಿಂದುಳಿದ ಯುವ ಮೋರ್ಚಾ ಅಧ್ಯಕ್ಷ ಶ್ರೀಶೈಲ್ ಮದರಿ, ಸದಾಶಿವ ನರಳೆ, ರಾಜಶೇಖರ್ ದೇವರಮನೆ, ಚಂದ್ರಮ ಅಂಬಣ್ಣ ನರಳೆ, ಬಸವರಾಜ ಖಸ್ಕಿ, ಸುನಿಲ್ ಇನ್ನಿತರ ಸಮುದಾಯದ ಮುಖಂಡರು ಭಾಗವಹಿಸಿದರು.