ಹುಡಗಿಯನ್ನ ಚುಡಾಯಿಸಿದ್ದಕ್ಕೆ, ತಲೆ ಬೊಳಿಸಿ ಸುಣ್ಣ ಹಚ್ಚಿ ಚಪ್ಪಲಿ ಹಾರ ಹಾಕಿ ಮೆರವಣಿಗೆ..! ಎಲ್ಲಿ ಅಂತಿರಾ..?
ವಿಜಯಪುರ : ಹುಡುಗಿಯೋರ್ವಳಿಗೆ ಚುಡಾಯಿಸಿದಕ್ಕೆ ಇಬ್ಬರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿರುವ ಘಟನೆ ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದ ಬಳಿಯ ಬಸವ ನಗರದಲ್ಲಿ ನಡೆದಿದೆ.
ತೇಜು ಚವ್ಹಾಣ, ರಾಜು ಚವ್ಹಾಣ ಎಂಬುವರ ಕೇಸ ಮುಂಡನೆ ಮಾಡಲಾಗಿದೆ. ಶಾಸಕ ದೇವಾನಂದ ಚವ್ಹಾಣ ಕ್ಷೇತ್ರದಲ್ಲಿ ಹೆಗಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಮುಖ್ಯಸ್ಥರ ಸಮ್ಮುಖದಲ್ಲಿ ತಲೆ ಬೋಳಿಸಿ ತಲೆಗೆ ಸುಣ್ಣ ಬಳಿದು ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದರು. ಅದಕ್ಕಾಗಿ ಸ್ಥಳೀಯರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ವಿವರ:
ಮಹಾರಾಷ್ಟ್ರದಲ್ಲಿ ಓರ್ವ ಹುಡುಗಿ ವಿಚಾರಕ್ಕೆ ಗಲಾಟೆ ಆಗಿದೆ. ಅದಕ್ಕಾಗಿ ಹಿರಿಯರ ಸಮ್ಮುಖದಲ್ಲಿ ಈ ಇಬ್ಬರ ಕೇಸ್ ಮುಂಡನೆ ಮಾಡಲಾಗಿದೆ. ಅದಕ್ಕಾಗಿ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಇನ್ನೂ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ಪೊಲೀಸರು ಅಧಿಕಾರಿ ಮಾಹಿತಿ ತಿಳಿಸಿದ್ದಾರೆ.