ಲಿಂಗಸೂಗೂರು: ತಾಲೂಕಿನ ಗುಡಗುಂಟಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಲ ದೊಡ್ಡಿಯ ಮಂಜುನಾಥ್ ಎಂಬ ಬಾಲಕ ಬಹು ದಿನಗಳಿಂದ ವಿಕಲಾಂಗತೆಯಿಂದ ಬಳಲುತ್ತಿದ್ದು, ಸಂಚಾರ ಮಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ. ತನ್ನ ಅಸಹಾಯಕತೆಯನ್ನು ವಿವಿಧ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸಾರ್ವಜನಿಕರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನೋವನ್ನು ಹಂಚಿಕೊಡಿದ್ದ.
ಯುವಕ ಮಂಜುನಾಥನ ನೋವಿಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷರಾದ ಈಶ್ವರ್ ಎಂ. ವಜ್ಜಲ್ ಸ್ಪಂದಿಸಿ ತ್ರಿ ಚಕ್ರದ ಸೈಕಲ್ ವಿತರಣೆ ಮಾಡಲು ಒಪ್ಪಿಕೊಂಡಿದ್ದರು. ಅಂದರಂತೆ ಇಂದು ಗುಡಗುಂಟಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಮುಂಭಾಗದಲ್ಲಿ ವಿಕಲಾಂಗ ಬಾಲಕನಿಗೆ ಸೈಕಲ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಮಂಜುನಾಥ ನನ್ನ ನೋವಿಗೆ ಸ್ಪಂದಿಸಿದ ಯುವ ನಾಯಕ ಈಶ್ವರ್ ಎಂ. ವಜ್ಜಲರಿಗೆ ಹಾಗೂ ಅವರ ಕುಟುಂಬಕ್ಕೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದನು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಗೋವಿಂದ ನಾಯಕ್, ಅಮರೇಶ್ ರತ್ನಗಿರಿ, ಮಲ್ಲರಡ್ಡೆಪ್ಪ ಜಕ್ಕರಮಡು, ಅಬ್ದುಲ್ ಬೇಕರಿ, ಮೈಬೂಬ್ ಸಾಬ್, ಶರಣು ಜೀ ಪವಾರ್, ಶಿವು ಕೆಂಪು, ಬಸವರಾಜ್ ಜಗದ್, ತಿರುಪತಿ ಗಲಗ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.