ಶಿಸ್ತು, ದೇಶಪ್ರೇಮ, ಭಾವೈಕ್ಯ ಮೂಡಿಸುವುದೇ ಭಾರತ ಸೇವಾದಳ, ಸುಜಾತಾ ಹುನ್ನೂರ ಕ್ಷೇತ್ರ ಶಿಕ್ಪ್ಷಣಾಧಿಕಾರಿ ಚಡಚಣ ರವರ ಅಭಿಮತ
ಇಂಡಿ : ದೇಶ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ತಾಳ್ಮೆ, ಸೇವಾ ಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ಇಂದಿನ ಮಕ್ಕಳು ಅತ್ಯುತ್ತಮ ಕಲಿಕೆ ಮೂಲಕ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕೆಲವು ದುಶ್ಚಟಗಳ ಮೂಲಕ ಭವಿಷ್ಯಕ್ಕೆ ಸಂಚಕಾರ ತರಿಸಿಕೊಳ್ಳುತ್ತಿದ್ದಾರೆ. ಸೇವಾದಳದ ಮೂಲಕ ದೇಶಪ್ರೇಮ, ಭಕ್ತಿ ಸೇವೆ ಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಚಡಚಣ ಕ್ಷೇತ್ರ ಶಿಕ್ಷಣ ಅಧಿಕಾರಿ ಸುಜಾತಾ ಹುನ್ನೂರು ಹೇಳಿದರು.
ತಾಲ್ಲೂಕಿನ ಅರ್ಜನಾಳ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ೬ ನೇ ದಿನದ ಭಾರತ ಸೇವಾದಳದ ಶಿಬಿರದ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.
ಭಾರತ ಸೇವಾದಳ ಉದ್ದೇಶ ಶಿಕ್ಷಣ, ಆರೋಗ್ಯ, ವಿಪತ್ತು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರ ನೀಡುತ್ತದೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಶಿಬಿರದಲ್ಲಿ ಕಲಿತ ಭೊಧನೆ, ಶಿಸ್ತು, ಕಠಿಣ ಪರಿಶ್ರಮ, ಸ್ಪೂರ್ತಿಯನ್ನು ಮಕ್ಕಳಿಗೆ ಕಲಿಸಬೇಕು. ಇಂದಿನ ಸಮಾಜದಲ್ಲಿ ದೇಶಪ್ರೇಮ ಕಡಿಮೆ ಯಾಗುತ್ತಿದೆ. ಬೇರೆ ಬೇರೆ ದೇಶದ್ರೋಹಿ ಕೆಸಲದಲ್ಲಿ ಇಂದಿನ ಯುವ ಮಕ್ಕಳು ಬಲಿಯಾಗುತ್ತಿದ್ದಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪಾಲಕರು ಮತ್ತು ಶಿಕ್ಷಕರು ಸೇರಿ ಒಳ್ಳಯ ಶಿಕ್ಷಣ ಸಂಸ್ಕಾರ ನೀಡಿ ದೇಶದ ಪ್ರಗತಿಗೆ ಸಹಾಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ನಾಗಠಾಣ ಕ್ಷೇತ್ರದ ಶಾಸಕರ ಪುತ್ರಿ ಯುವ ನಾಯಕಿ ಸುರ್ಪಣಾ ವಿಠ್ಠಲ ಕಟಕದೊಂಡ, ಶಿಕ್ಷಕರ ಸೋಸಾಯಿಟಿ ಅಧ್ಯಕ್ಷ ಎಸ್ ಎಸ್ ಪಾಟೀಲ, ರಾಜ್ಯ ಸರಕಾರದ ೫ ಗ್ಯಾರೆಂಟಿ ಯೋಜನೆ ಜಿಲ್ಲಾ ಸದಸ್ಯ ಸಣ್ಣಪ್ಪ ತಳವಾರ ಮಾತನಾಡಿದರು, ಭಾರತ ಸೇವಾದಳದ ವಲಯ ಸಂಘಟಕರು ನಾಗೇಶ ಡೋಣೂರ, ಸೇಮಶೇಖರ ರಾಠೋಡ, ಶೇಬಿರ ಮುಲ್ಲಾ, ಯಶ್ವಂತ ಗೋಡೆಕರ, ಬಸಗೊಂಡ ಪಾಟೀಲ, ಶ್ರೀಶೈಲ ಬಿರಾದಾರ, ರಮೇಶ ಗೋಡೆಕರ, ಗಂಗಾಧರ ಹೂಗಾರ, ಆರ್ ಜಿ ಅವರಾಧಿ, ಎಸ್ ಜಿ ಮಾಲಗಾರ, ಎಮ್ ಜಿ ಪರೀಟ, ಎಚ್ ಎಸ್ ನಿಮಾದಾರ, ಶ್ರೀಮತಿ ಎಮ್ ಎಸ್ ರಾಮಂಪುರ ಇತತರು ಇದ್ದರು.
ಇಂಡಿ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ೬ ನೇ ದಿನದ ಭಾರತ ಸೇವಾದಳದ ಶಿಬಿರದ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ ಸುಜಾತಾ ಹುನ್ನೂರ ಕ್ಷೇತ್ರ ಶಿಕ್ಪ್ಷಣಾಧಿಕಾರಿ ಚಡಚಣ ರವರು ಮಾತನಾಡಿದರು.