ಸಂಜೆವಾಣಿ ವರದಿಗಾರ ರಾಮಣ್ಣ ಬಿ.ಎಡ್ ವಿಧಿ ವಶಕ್ಕೆ ಕಂಬನಿ ಮಿಡಿದ ಕವಿತಾಳ ಜನತೆ
ರಾಯಚೂರು : ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಕವಿತಾಳ ಹೋಬಳಿ ವರದಿಗಾರ ವೃತ್ತಿಯಲ್ಲಿ ಹಿರಿಯ ಪತ್ರಕರ್ತರಾದ ರಾಮಣ್ಣ ಬಿ ಎಡ್,ಒಂದು ದಶಕದಿಂದ ತ್ರಯಂಬಕೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಮಣ್ಣ ಬಿ ಎಡ್ ವಿಧಿವಶರಾಗಿದ್ದಾರೆ.
ಮಸ್ಕಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯಾದ್ದಲದಿನ್ನಿ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ. ಹಾಗೆ ರಾಮಣ್ಣ ನ ಕುಟುಂಬಕ್ಕೆ ಸಾಂತ್ವನ ತುಂಬಿದ ಶಿವಶಕ್ತಿಪೀಠ ಇರಕಲ್ ಮಠದ ಶ್ರೀ ಬಸವಪ್ರಸಾದ ಮಹಾ ಸ್ವಾಮಿಗಳು.
ಅಕಾಲಿಕ ಮರಣ ಹೊಂದಿದ ಬಿ ಎಡ್ ರಾಮಣ್ಣನಿಗೆ ಕವಿತಾಳ ಪತ್ರಕರ್ತರು ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ,ಕರ್ನಾಟಕ ರಕ್ಷಣಾ ವೇದಿಕೆ, ಎಂ ಆರ್ ಎಚ್ ಎಸ್ , ಡಿ ಎಸ್ ಎಸ್, ಹಾಗೂ ಭೀಮ ಆರ್ಮಿ ವಿವಿಧ ಸಂಘಟನೆಗಳು ಕ್ರಾಂತಿ ಕಾರಿ ಗೀತೆಗಳನ್ನ ಹಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.



















