ಕರ್ನಾಟಕ ಸರಕಾರದ ಯೋಜನೆಯಿಂದ ಇಂಡಿ, ನಾಗಠಾಣ ಹಾಗೂ ಮಹಾರಾಷ್ಟ್ರದ ಅನೇಕ ಹಳ್ಳಿಗಳಿಗೆ ತುಂಬಾ ಲಾಭವಾಗಿದೆ
ವಿಜಯಪುರ | ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಇಂಡಿ ಮತಕ್ಷೇತ್ರದಲ್ಲಿಯ ವಿವಿಧ ಅಭಿವೃದ್ಧಿಕಾಮಗಾರಿಗಳ ಉದ್ಗಾಟನೆಗೆ ಆಗಮಿಸುತ್ತಿರುವ ನಿಮಿತ್ಯ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ಎಸ್. ಲೋಣಿ ರವರ ನೇತೃತ್ವದಲ್ಲಿ ಇಂದು ದಿನಾಂಕ: ೦೮-೦೭-೨೨೫ ರಂದು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಭೆಯ ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಎಸ್. ಲೋಣಿ ರವರು ಮಾತನಾಡುತ್ತಾ ಕರ್ನಾಟಕ ರಾಜ್ಯದ ಘನಸರ್ಕಾರದ ಗ್ಯಾರಂಟಿ ಯೋಜನೆಯೊಂದಿಗೆ ಎಲ್ಲ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಇವೆ. ಅದರಂತೆ ಇಂಡಿ ಮತಕ್ಷೇತ್ರದಲ್ಲಿ ೪೫೫೦ ಕೋಟಿ ರೂ. ಗಳ ವಿವಿಧ ಯೋಜನೆಗಳ ಉದ್ಘಾಟನೆ, ಅಡಿಗಲ್ಲು ಸಮಾರಂಭ ಹೀಕೆ ಅನೇಕ ಯೋಜನೆಗಳನ್ನು ಕೈಗೊಂಡ ಕುರಿತು ಕಾರ್ಯಕ್ರಮಗಳು ಕೈಕೊಳ್ಳಲಾಗಿದೆ ಎಂದು ಹೇಳಿದರು.
ಅದೇ ರೀತಿ ಬಿ.ಜೆ.ಪಿ. ಪಕ್ಷದ ನಾಯಕರು ಇಂದು ಈ ಗ್ಯಾರಂಟ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊAಡಿವೆ ಎಂದು ಹೇಳುತ್ತಿರುವದಕ್ಕೆ ಇದು ಮಾದರಿಯಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮವಾಗಿದೆ. ಕರ್ನಾಟಕ ಸರಕಾರದ ಯೋಜನೆಯಿಂದ ಇಂಡಿ, ನಾಗಠಾಣ ಹಾಗೂ ಮಹಾರಾಷ್ಟçದ ಅನೇಕ ಹಳ್ಳಿಗಳಿಗೆ ತುಂಬಾ ಲಾಭವಾಗಿದೆ ಎಂದು ಈ ಎಲ್ಲ ಹಳ್ಳಿಗಳಿಂದ ರೈತರು, ಹಾಗೂ ಅನೇಕ ಕಾರ್ಯಕರ್ತರು ಬರುತ್ತಿರುವರು ಕಾರಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಅಂಗಘಟಕಗಳ ಅಧ್ಯಕ್ಷರುಗಳು ಹಾಜರಾಗಿ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿಸಬೇಕೆಂದು ಕೋರಿದರು.
ಕೆ.ಪಿ.ಸಿ.ಸಿ. ಸದಸ್ಯರಾದ ಅಬ್ದುಲ ಹಮೀದ ಮುಶ್ರೀಫ, ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ ಮೋಮಿನ, ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರಾದ ಇಲಿಯಾಸ ಅಹ್ಮದ ಬೋರಾಮಣಿ, ಗಂಗಾಧರ ಸಂಬಣ್ಣಿ, ಶಬ್ಬೀರ ಜಾಗಿರದಾರ, ಸುರೇಶ ಹಾರಿವಾಳ, ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ ಪಟೇಲ, ಡಿ. ಎಲ್. ಚವ್ಹಾಣ, ಸುಭಾಶ ಕಾಲೇಬಾಗ, ಮಾದೇವಿ ಗೋಕಾಕ, ಶಿವನಗೌಡ ಬುಜಗೊಂಡ, ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಆಫ್ತಾಬಕಾದ್ರಿ ಇನಾಮದಾರ, ಸಾಹೇಬಗೌಡ ಬಿರಾದಾರ, ಅಶ್ಪಾಕ ಮನಗೂಳಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಸಲೀಮ ಪೀರಜಾದೆ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲಅಹ್ಮದ ಬಾಗಮಾರೆ, ರಮೇಶ ಗುಬ್ಬೇವಾಡ, ಬ್ಲಾಕ್ ಅಧ್ಯಕ್ಷರಾದ ಆರತಿ ಶಾಪೂರ, ಶಾಜಾನ ಮುಲ್ಲಾ, ಬಶೀರ ಶೇಠ, ಬಾಳನಗೌಡ ಪಾಟೀಲ, ರಾಮಚಂದ್ರ ಹಕ್ಕೆ, ಸತೀಶ ಅಡವಿ, ಅಬ್ದುಲ ಪೀರಾಂ ಜಮಖಂಡಿ, ಅಂಗಘಟಕದ ಅಧ್ಯಕ್ಷರಾದ ಆನಂದ ಜಾಧವ, ದೇವಾನಂದ ಲಚ್ಯಾಣ, ಲಾಲಸಾಬ ಕೋರಬು, ವಿದ್ಯಾಧರ ಪಾಟೀಲ, ಕೃಷ್ಣಾ ಲಮಾಣಿ, ಅಬುಬಕರ ಕಂಬಾಗಿ, ಪರಶುರಾಮ ಹೊಸಮನಿ, ವೀರೇಶ ಕಲಾಲ, ಬಾಬು ಯಾಳವಾರ, ರುಕ್ಮಿಣಿ ಚವ್ಹಾಣ, ಸರ್ಫರಾಜ ಮಿರ್ದೆ, ಭಾರತಿ ಹಡಪದ, ವಿಶ್ವನಾಥ ತಳವಾರ, ಅಮಿತ ಚವ್ಹಾಣ, ಬಿ. ಎಸ್. ಗಸ್ತಿ, ಲಕ್ಷಿö್ಮÃ ಕ್ಷೀರಸಾಗರ, ಎಂ. ಬಿ. ಮೆಂಡೆಗಾರ, ಹಮೀದ ಮನಗೂಳಿ, ಸರಫರಾಜ ಅಗಸಬಾಳ, ಮಹೇಶ ಶಾಹಪೂರ, ರಜಾಕ ಕಾಖಂಡಕಿ, ಹರೀಷ ಕೌಲಗಿ, ಶಫೀಕ ಮನಗೂಳಿ, ಎ. ಡಿ. ಬಡೇಘರ, ಡಾ. ಶರಣಪ್ಪ ಚೌರ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಭಾರತಿ ಹೊಸಮನಿ, ಶಮೀಮಾ ಅಕ್ಕಲಕೋಟ, ಬೀರಪ್ಪ ಜುಮನಾಳ, ಲಕ್ಷö್ಮಣ ಬಸ್ಟಾಲ, ಸುನಂದಾ ಸೊನ್ನಹಳ್ಳಿ, ಅಸ್ಲಮ ಗುಂದಗಿ, ಕೆ. ಎಸ್. ಪರಸೆಟ್ಟಿ, ಮಹಾದೇವ ಸಿದ್ದಪ್ಪಾ ಜಾಧವ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.



















