ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಚನ್ನಬಸವಶ್ರೀ ಎಜ್ಯಕೇಷನ್ ರೂರಲ್ ಕಲ್ಚರಲ್ ಸೊಸೈಟಿ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು ಮತ್ತು ಅರ್ಥ ಪೂರ್ಣವಾದುದು ಎಂದು ಜಮಖಂಡಿ ಓಲೇಮಠದ ಪರಮ ಪೂಜ್ಯ ಶ್ರೀ ಆನಂದ ದೇವರು ಹೇಳಿದರು ಶನಿವಾರ ತಾಲೂಕಿನ ಹುಲ್ಲೂರ ಗ್ರಾಮದ ಚನ್ನಬಸವಶ್ರೀ ಸೊಸೈಟಿಯಿಂದ ಪ್ರತಿವರ್ಷ ಕೊಡಲಾಗುವ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ , ಲಿಂಗೈಕ್ಯ ಶ್ರೀಡಾ| ಅಭಿನವ ಕುಮಾರ್ ಚನ್ನಬಸವ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಈ ಸಾಧಕರನ್ನು ನ ಸಮಾಜಕ್ಕೆ ಪರಿಚಯ ಮಾಡುವ ಮೂಲಕ ಸಾಧಕರಿಗೆ ಸಂಸ್ಥೆ ಪ್ರೇರಣೆ ಪ್ರೋತ್ಸಾಹ ನೀಡುತ್ತಿದೆ ನಮ್ಮ ಪರಮಪೂಜ್ಯರಾದ ಅಭಿನವ ಕುಮಾರ ಚನ್ನಬಸವ ಅವರ ನಾಮಾಂಕಿತ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಈ ಸಂಸ್ಥೆ ಹಣಗಳಿಸಲು ಮಾಡಿಲ್ಲ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆರಂಭಿಸಲಾಗಿದೆ ಎಂದರು.
ಯರಝರಿ ಶ್ರೀ ಯಲ್ಲಾಲಿಂಗಮಠದ ಶ್ರೀ ಮಲ್ಲಾಲಿಂಗ ಮಹಾಸ್ವಾಮಿಗಳು,ಇಟಗಿ ಮೇಲುಗದ್ದುಗೆ ಹಿರೇಮಠದ ಶ್ರೀ ಗುರುಶಾಂತವೀರ ಮಹಾಸ್ವಾಮಿಗಳು, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಂ ಎಂ ಬೆಳಗಲ್ ಮಾತನಾಡಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆ ಮತ್ತಷ್ಟು ಹೆಚ್ಚಾಗುವಂತೆ ಮಾಡುವ ಕಾರ್ಯ ಮಾದರಿಯಾಗಿದೆ ಮಂಜುನಾಥ ಕೊಪ್ಪ ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ ಇದರ ಸದುಪಯೋಗ ಈ ಭಾಗದ ಜನರು ಪಡೆಯಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ ಕೊಪ್ಪ ಮಾತನಾಡಿ ಲಿಂಗೈಕ್ಯ ಡಾ| ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳ ಆಶಯದಂತೆ ಪ್ರತಿವರ್ಷವೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪೂಜ್ಯರ ಹೆಸರಿನಲ್ಲಿ ನೀಡಲಾಗುತ್ತಿದೆ 15 ಮಕ್ಕಳೂಂದಿಗೆ ಆರಂಭಿಸಿಲಾದ ನಮ್ಮ ಸಂಸ್ಥೆಯಲ್ಲಿಗ 500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಈ ಸಂಸ್ಥೆ ಆರ್ಥಿಕ ಲಾಭಕ್ಕಾಗಿ ನಾನು ಆರಂಭಿಸಿಲ್ಲ ನಮ್ಮ ಭಾಗದ ಮಕ್ಕಳು ಇಲ್ಲಿಂದ ಪಟ್ಟಣ ಪ್ರದೇಶಕ್ಕೆ ಹೋಗಿ ಓದಲು ಕಷ್ಟಪಡುತ್ತಿದ್ದರು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆ ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇನೆ ಮತ್ತು ನಮ್ಮ ಸಂಸ್ಥೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾಗಿ ತಿಳಿಸಿದರು ನಂತರ ರಾತ್ರಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ಈ ಕಾರ್ಯಕ್ರಮದಲ್ಲಿ ಕಾಳಗಿ ರಾಚೋಟೇಶ್ವರಮಠದ ಶ್ರೀ ಮಹಾದೇವಪ್ಪಯ್ಯಾ ವಿಶ್ವಕರ್ಮ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಸುರೇಶಗೌಡ ಹಿರೇಮಠ, ಮಾಜಿ ಜಿಲ್ಲಾ ಪಂಚಾಯತಿ ಪ್ರಭುಗೌಡ ದೇಸಾಯಿ, ಮನಗೂಳಿ ಪುರಸಭೆ ಅಧ್ಯಕ್ಷ ಎಂ ಡಿ ಮೈತ್ರಿ,ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ಮಾಜಿ ತಾಪಂ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಜಾವೀದ ಇನಾಮದಾರ,ಕರಿಯಪ್ಪ ಆಸಂಗಿ,ಹುಲ್ಲೂರ ಗ್ರಾಪಂ ಅಧ್ಯಕ್ಷೆ ಮೈನಾ.ಜಿ ಚವ್ಹಾಣ, ಗೀತಾ ಬಿದ್ನಾಳ, ಮಹಾದೇವಪ್ಪ ಹಳ್ಳದ ಬೆಳ್ಳಪ್ಪ ಮೇಟಿ, ಸಂತೋಷ ಜಾಧವ,ಗುಂಡು ಚವ್ಹಾಣ, ವಿರೇಶ ಗುರುಮಠ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಶಿಕ್ಷಕರು ಪಾಲಕರು ಭಾಗವಹಿಸಿದ್ದರು.