ಚಡಚಣ : ದೇಶ ಸೇವೆಗೆ ತೆರಳಿದ ವೀರ ಯೋಧ ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲ್ಲೂಕಿನ ಲೋಣಿ ಬಿ.ಕೆ ಗ್ರಾಮದ ದಯಾನಂದ ಪಾಟೀಲ್ (27) ವೀರ ಮರಣ ಹೊಂದಿದ್ದಾರೆ.
ಜಮ್ಮು ಕಾಶ್ಮೀರದ ಶ್ರೀ ನಗರದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ದಯಾನಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದಯಾನಂದ ಪಾಟೀಲ್ ಕಳೆದ ಐದು ವರ್ಷಗಳ ಹಿಂದೆ CISF ಸೇರಿದ್ದರು. ದೇಶ ಸೇವೆ ಮಾಡುವ ಮಾಡುವ ಮಹಾದಾಶಸೆಯನ್ನು ಹೊಂದಿದ್ದರು. ಇನ್ನು ಯೋಧನ ಸಾವಿನ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲೋಣಿ ಬಿ.ಕೆ ಗ್ರಾಮ ಯೋಧರ ಗ್ರಾಮವೆಂದೇ ಹೆಸರಾಗಿದ್ದು, 15 ಕ್ಕೂ ಹೆಚ್ಚು ಯುವಕರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲ ಬಾರಿಗೆ ದೇಶ ಸೇವೆಗೆ ತೆರಳಿದ ಗ್ರಾಮದ ಯುವಕನ ಸಾವಿನ ಸುದ್ದಿ ತಿಳಿದು ಗ್ರಾಮ ದುಃಖದ ಮಡುವಿನಲ್ಲಿದೆ.