ರಥದ ಎತ್ತರಿಗಿಂತ ಭಕ್ತಿಯ ಎತ್ತರ ಮುಖ್ಯ
ಇಂಡಿ : ಗ್ರಾಮದ ರಥ ಎಷ್ಟು ಎತ್ತರವಾಗಿದೆ ಎಂಬುದು ಮುಖ್ಯವಲ್ಲ, ಗ್ರಾಮಸ್ಥರಿಗೆ ದೇವರ ಮೇಲೆ ಎಷ್ಟು ಭಕ್ತಿ ಇದೆ ಎಂಬುದು ಮುಖ್ಯ ಎಂದು ಯರನಾಳದ ಪರಮಪೂಜ್ಯ ಸಂಗನಬಸವ ಶ್ರೀಗಳು ಹೇಳಿದರು.
ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತ್ರೆ ಅಥವಾ ರಥೋತ್ಸವ ಸಂದರ್ಭದಲ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ನಗರಗಳಲ್ಲಿ ವಾಸಿಸಿರುವ ಎಲ್ಲರೂ ಹುಟ್ಟುರಿಗೆ ಬರುತ್ತಾರೆ. ಅಷ್ಟೇ ಅಲ್ಲ, ಮದುವೆಯಾಗಿ ಬೇರೆ ಬೇರೆ ಭಾಗಗಳಲ್ಲಿ ಪತಿ ಕುಟುಂಬದವರೊಂದಿಗೆ ವಾಸವಿರುವ ಹೆಣ್ಣುಮಕ್ಕಳನ್ನು ತವರೂರಿಗೆ ಕರೆ ತರುವ ವಿಶೇಷ ಶಕ್ತಿ ಇರುವದು ಜಾತ್ರೆಗಳಿಗೆ ಮಾತ್ರ ಎಂದರು.
ಗ್ರಾಮದ ಎಲ್ಲರನ್ನು ಒಂದುಗೂಡಿಸುವ ಹಾಗೂ ಸಂಘಟಕರನ್ನಾಗಿ ಮಾಡುವ ಶಕ್ತಿ ರಥೋತ್ಸವಕ್ಕೆ ಇದೆ. ರೈತರು ಎಲ್ಲ ರಾಶಿಗಳನ್ನು ಮಾಡಿ ಸಂತೋಷ ಸಂಭ್ರಮದಿಂದ ಜಾತ್ರೆ ರಥೋತ್ಸವ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ವಿಜ್ರಂಭಣೆಯಿಙದ ಜರುಗಿದ ಅಗ್ನಿ ಶಮನ ಕಾರ್ಯಕ್ರಮ
ಬಂಥನಾಳ ಶೀಗಳ ಅಡ್ಡಪಲ್ಲಕ್ಕಿ, ನಂದಿಕೋಲು ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ ವಿಜ್ರಂಭಣೆಯಿAದ ಜರುಗಿತು.
ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪ್ರದಾಯದಂತ ಇಲ್ಲಿನ ಕಮರಿಮಠದ ಒಳ ಆವರಣದಿಂದ ವಾದ್ಯಮೇಳ, ಜಯಘೋಷಗಳೊಂದಿಗೆ ಕಮರಿಮಠದ ಒಳ ಆವರಣದಿಂದ ಆರಂಭವಾದ ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರ ಹೊತ್ತ ಅಡ್ಡ ಪಲ್ಲಕ್ಕಿ ಮೆರವಣ ಗೆ ನಡೆಯಿತು.
ಈ ಮೆರವಣ ಗೆಯಲ್ಲಿ ವೀರಗಾಸೆ, ಸಂಬಾಳ, ಬ್ಯಾಂಕಡಸೆಟ್ ಕಲಾವಿದರು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದರು. ನಂತರ ಈ ಮೆರವಣ ಗೆಯು ಕಮರಿಮಠದ ಮುಂಭಾಗದ ಹೊರ ಆವರಣದ ಅಗ್ಗಿ ಕಟ್ಟೆಯತ್ತ ಸಾಗಿತು. ಈ ವೇಳೆ ಯುವಕರು ನಂದಿಕೋಲು ಎತ್ತಿ ಸೇವೆಸಲ್ಲಿಸಿದರೆ, ಮತ್ತೆ ಕೆಲವರು ಪಾಲಕಿ ಹೊತ್ತು ಭಕ್ತಿ ಸಮರ್ಪಿಸಿದರು.
ಈ ಮೆರವಣ ಗೆ ಅಗ್ಗಿ ಕಟ್ಟೆ ಸಮೀಪಿಸುತ್ತಿದ್ದಂತೆ ನೆರೆದ ಸಹಸ್ರಾರು ಭಕ್ತರ ಮನದಲ್ಲಿ ಸಂತಸದ ಭಾವ ಮೂಡಿತು. ಅಷ್ಟರಲ್ಲೆ ಬಂಥನಾಳ ಶ್ರೀಗಳ ಪಾಲಕಿ ಅಗ್ಗಿ ಪ್ರವೇಶ ಕಾರ್ಯಕ್ರಮ ವಿಜ್ರಂಭಣೆಯಿAದ ನೆರವೇರಿತು.ಬಳಿಕ ವೀರಗಾಸೆ ಕಲಾವಿದರು, ಹರಕೆ ಹೊತ್ತ ಭಕ್ತರು ಕೆಂಡದಲ್ಲಿ ಭಕ್ತಿ ಭಾವದಿಂದ ಅಗ್ಗಿ ಹಾಯ್ದು ಭಕ್ತಿ ಸಮರ್ಪಿಸುವದರೊಂದಿಗೆ ಅಗ್ನಿ ಶಮನ ಕಾರ್ಯಕ್ರಮ ಯಶಸ್ವಿಯಾಯಿತು.
ದಕ್ಷಿಣ ಸೋಲಾಪುರ ತಾಲೂಕಿನ ಶಿರವಾಳದ ಸೋಮಲಿಂಗ ಮಹಾರಾಜರು, ರೇವಣಸಿದ್ದ ಮಹಾರಾಜರು, ಹೂವಿನ ಹಿಪ್ಪರಗಿಯ ಮಾತೋಶ್ರೀ ದ್ರಾಕ್ಷಾಯಣ ಅಮ್ಮನವರು ಈ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.



















