ಲಿಂಗಸೂಗೂರು: ತಾಲೂಕಿನ ಮುದಗಲ್ ಹೋಬಳಿಯ ಬನ್ನಿಗೋಳದಲ್ಲಿ ಗುರುವಾರ ಸಾಯಂಕಾಲ ಗುಡುಗು, ಮಳೆ ಸಹಿತ ಬೀಸಿದ ಸಿಡಿಲಿಗೆ ಸಾವಿಗಿಡಾದ ಕುರಿಗಾಯಿ ರಾಮಪ್ಪ ಬಸಪ್ಪ ಪೂಜಾರಿ ಮಾದರ ಮನೆಗೆ ಅಧಿಕಾರಿಗಳ ತಂಡ ಬೇಟಿ ನೀಡಿದರು.
ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಯಮನಪ್ಪ ವಾಲ್ಮೀಕಿ, ಲಿಂಗಸುಗೂರು ತಾಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ರಾಚಪ್ಪ, ಪಶು ವೈಧ್ಯರಾದ ಡಾ. ಪ್ರಭು, ಡಾ.ಅಮರೇಶ ಸೇರಿ ಅಧಿಕಾರಿಗಳು ಸ್ಥಳ ಪರಿಶಿಲನೆ ನಡೆಸಿದರು.
ಅಲ್ಲದೆ ಸಿಡಿಲಿನಿಂದ ಸಾವಿಗಿಡಾದ ಕುರಿಗಳಿಗೆ ಪರಿಹಾರ ಕಲ್ಪಿಸುವದಾಗಿ ತಿಳಿಸಿ ಸಿಡಿಲಿನಿಂದ ಅಸ್ವಸ್ಥವಾಗಿದ್ದ ಕುರಿ, ಮೇಕೆ ಗಳನ್ನು ಪರೀಶಿಲಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ರಾಯಪ್ಪ, ಹನುಮಂತ ಚಿತ್ತಾಪುರ, ದುರಗಪ್ಪ ಹರಿಜನ ಸೇರಿ ಅನೇಕರು ಇದ್ದರು.