ಮುದ್ದೇಬಿಹಾಳ : ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಶತಮಾನ ಕಂಡ ಹಳೆಯದಾದ ಗ್ರಾಮದ ಪ್ರಮುಖವಾದ ಬಾವಿಯು ಇತ್ತೀಚೆಗೆ ಅನಾಥವಾಗಿ ಬಿದ್ದು ಹಾಳಾಗಿದೆ. ಗ್ರಾಮದ ಮುಂಬಾಗದಲ್ಲಿರುವ ಈ ಬಾವಿ, ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು. ಹಳೆಯ ಕಾಲದ ಕಟ್ಟಡ ಶೈಲಿಯಲ್ಲಿ ನಿರ್ಮಿತವಾಗಿದ್ದ ಈ ಬಾವಿಯು, ಇತ್ತೀಚೆಗೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ನಾಶದ ಅಂಚಿಗೆ ತಲುಪಿತ್ತು. ನಿರ್ವಹಣೆಯ ಕೊರತೆಯ ಕಾರಣವಾಗಿ ಅದರ ಹಿಂದಿನ ಭಾಗದ ಗೋಡೆ ಬಿದ್ದು ಹೋಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ.
ಬಾವಿ ನಮ್ಮ ಗ್ರಾಮದ ಇತಿಹಾಸದ ಒಂದು ಭಾಗ. ನಾವು ಬಾಲ್ಯದಲ್ಲಿ ಇಲ್ಲಿ ನೀರು ತೆಗೆದುಕೊಂಡದ್ದು ನೆನಪಾಗುತ್ತದೆ. ಈಗ ಇದು ಬಿದ್ದು ಹಾಳಾಗಿರುವದನ್ನು ನೋಡಿ ನೋವು ತಂದಿದೆ,” ಎಂದು ಹಿರಿಯರಾದ ಎಂ ಎಂ ಹತ್ತಿ ಹೇಳಿದರು.
ಈ ಘಟನೆ ಗ್ರಾಮದಲ್ಲಿ ಭೀತಿಯನ್ನುಂಟುಮಾಡಿದ್ದು, ಈ ಕೂಡಲೇ ಪಂಚಾಯತಯವರು ನಮ್ಮೂರ ಭಾವಿಯನ್ನು ಹಳೆಯ ಶೈಲಿಯ ಕಟ್ಟಡದಲ್ಲಿ ನೂತನ ಶೈಲಿಯನ್ನು ಬಳಸಿ ಕಟ್ಟಡ ಮಾಡಬೇಕು ಎಂದು ಗ್ರಾಮದ ಯುವ ಮುಖಂಡರಾದ ಚಂದ್ರಶೇಖರ ಬಿರಾದಾರ ಅವರು ಒತ್ತಾಯಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಮಕ್ಕಳು ದನಕರುಗಳು, ಇಳಿಯಸ್ಸಿನವರು ಸ್ಥಳಕ್ಕೆ ತೆರಳದಂತೆ ನೀಗಾ ವಹಿಸಬೇಕು. ಬಾವಿಯ ಸುತ್ತ ಬೇಲಿ ಹಾಕಬೇಕು ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಆಡಳಿತ ಮಂಡಳಿ ಬಾವಿಯನ್ನು ಭದ್ರಪಡಿಸಲು ಶೀಘ್ರದಲ್ಲೇ ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಅಧಿಕಾರಿಗಳ ಬೇಟೆ : ಬಿದರಕುಂದಿ ಗ್ರಾಮದ ಐತಿಹಾಸಿಕ ಭಾವಿ ಭಾರಿ ಸುರಿದ ಮಳೆಯಿಂದಾಗಿ ಮಣ್ಣು ಸಡಿಲಾಗಿ ಗೋಡೆ ಬಾವಿಯೋಳಗೆ ಕುಸಿದಿ ಬಿದ್ದಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ, ಯಾಕಂದರೆ ಗ್ರಾಮದಲ್ಲಿನ ಜಾತ್ರೆ, ಮೋಹರಂ, ಇನ್ನೀತರ ಹಬ್ಬ ಹರಿದಿನಗಳನ್ನು ಹಾಗೂ ಸಾರ್ವಜನಿಕರ ಮದುವೆ ಸಮಾರಂಭದಲ್ಲಿ ದೇವರ ಹರಕೆಗಳನ್ನು ನಿವಾರಣೆಯಾಗಲು ಈ ಬಾವಿಯ ನೀರನ್ನು ಗಂಗೆಯ ರೂಪದಲ್ಲಿ ಬಳಕೆ ಮಾಡುತ್ತಿದ್ದರು. ಆದರೆ ಸಧ್ಯ ಬಾವಿ ಬಿದ್ದಿದ್ದರಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದನ್ನು ಅರಿತು ಗುರುವಾರ ಬೆಳಗ್ಗೆ ಗ್ರಾಮ ಲೆಕ್ಕಾಧಿಕಾರಿಯಾದ ಹರ್ಷತ್ ಗೌಡ, ಪಿಡಿಓ ಪ್ರಭುದೇವ ಜಾವೂರ, ಕಾರ್ಯದರ್ಶಿ ಪರಸುರಾಮ ಚಲವಾದಿ, ಸಂಗಮೇಶ ಚಲವಾದಿ, ನಬೀಸಾ ವಾಲಿಕಾರ ಭಾವಿಯನ್ನು ವೀಕ್ಷಣೆ ಮಾಡಿದರು, ನಂತರ ಗ್ರಾಮಸ್ಥರು ಯಾವುದಾರು ಅನನುದಾನವನ್ನು ಪುರಾತತ್ವ ಇಲಾಖೆ, ಗ್ರಾಮ ಪಂಚಾಯತ, ಶಾಸಕರ ನಿದಿಯಿಂದ ಅನುದಾನ ನೀಡಬೇಕು ಎಂದು ಗ್ರಾಮಸ್ಥರು ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಮಾರಗೌಡ ಪಾಟೀಲ್, ಆದಪ್ಪ ಕೋಳೂರ, ಕೆ ಜಿ ಕುರಿ, ಗ್ರಾ ಪಂ ಸದಸ್ಯರಾದ ಹಣಮಂತ ಚಲವಾದಿ, ಕಾಶೀನಾಥ ಬಡೀಗೇರ, ಮೌನೇಶ ಬಡೀಗೇರ, ಮತ್ತಿತರ ಇದ್ದರು.