ಲಿಂಗಸೂಗೂರು: ಮಲಗಿದ ಸ್ಥಿತಿಯಲ್ಲಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ಸಾವು ಕಂಡ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ. ತಾಲೂಕಿನ ಮುದಗಲ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತ ಶಿಕ್ಷಕನನ್ನು ಕರಿಯಪ್ಪ (40) ಎಂದು ಗರುತಿಸಲಾಗಿದೆ. ಇನ್ನು ಶಿಕ್ಷಕ ಚಿಕ್ಕಲೆಕ್ಕಿಹಾಳ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅತೀಯಾದ ಮಧ್ಯ ಸೇವನೆ ಘಟನೆಗೆ ಕಾರಣವೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.