ಸಿಂದಗಿ : ಶಿಕ್ಷಕ ಬಸವರಾಜ್ ರವಿವಾರ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಟ್ವಿಸ್ಟ್ ಸಿಕ್ಕಿದೆ. ಹೌದು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರರ ಕಚೇರಿಯ ಆವರಣದಲ್ಲಿ ಶಿಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದೆ. ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್‌ಪಿ ಜಿ ಎನ್ ಪಾಟೀಲ್‌ನಿಂದ ಟಾರ್ಚರ್ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ ನಲ್ಲಿ ಉಲ್ಲೇಖನ ಮಾಡಲಾಗಿದೆ. ಎಸ್ ಎಲ್ ಭಜಂತ್ರಿ ಮುಖ್ಯಶಿಕ್ಷಕ ಹುದ್ದೆಯ ಚಾರ್ಜ್ ಶಿಕ್ಷಕ ಬಸವರಾಜ ಗೆ ಬಿಟ್ಟು ಕೊಟ್ಟಿದ್ದರು. ಚಾರ್ಜ್ ಬಿಟ್ಟುಕೊಟ್ಟ ಬಳಿಕ ಭಜಂತ್ರಿ ಸತಾಯಿಸಿದ್ದಾರೆ. ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ಸಿಂದಗಿ ಬಿಇಓ ಎಚ್ ಎಂ ಹರಿನಾಳ ನೋಟಿಸ್ ಕೊಡುತ್ತಿದ್ದರು. ಗ್ರಾಮದ ಸಂಗಮೇಶ್ ಚಿಂಚೋಳಿಯಿಂದ ಅಲಿಗೆಷನ್ ಮಾಡಿ ಸಿಆರ್ ಪಿ ಹಾಗೂ ಸಂಗಮೇಶ್ ನನ್ನಿಂದ ಹಣ ಪಡೆದಿದ್ದರು. ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ದೂರು ನೀಡಿದರು. ಆದ್ರೇ, ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಆಗಿದೆ. ನನ್ನ ಹೆಂಡತಿ, ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.