ಸರ್ವೆ ನಂಬರ್-೯೭ ಪುಸ್ತಕ ಬಿಡುಗಡೆ
ಇಂಡಿ : ತಾಲೂಕಿನ ಲೇಖಕ ಪ್ರಸ್ತುತ ಬಾಗಲಕೋಟೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಗುನ್ನಾಪೂರ ಅವರ ಮೂರನೇ ಪುಸ್ತಕ “ಸರ್ವೆ ನಂಬರ್-೯೭” ಕಥಾಸಂಕಲನವನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ, ಇಂಡಿ ಸಿಬ್ಬಂದಿ ಬಳಗದಿಂದ ಶ್ರೀ ಪ್ರಕಾಶ ಕಾಂಬಳೆ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಸರಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಭೂಮಾಪಕರಾದ ಯಮನೇಶ ಬಿರಾದಾರ ಮಾತನಾಡಿ, ನಮ್ಮ ಭೂಮಾಪನ ಇಲಾಖೆಯ ಇತಿಹಾಸವು ಕನ್ನಡ ಸಾಹಿತ್ಯದಲ್ಲಿ ಹೆಚ್ಚೆಚ್ಚು ಬರಲೆಂದು ಆಶಿಸುತ್ತ, ಅನಿಲ ಅವರು ಬರೆದ ಕತೆಗಳು ಹಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ ಮತ್ತು ಪ್ರತಿಷ್ಠಿತ ಬಹುಮಾನಗಳನ್ನು ಪಡೆದಿರುವ ಅನಿಲ ಗುನ್ನಾಪೂರ ಅವರಂತಹ ಲೇಖಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಇಲಾಖೆಯ ಎಸ್ ಕೆ ರಾಠೋಡ, ವಿಶ್ವನಾಥ ಬಂಕಲಗಿ, ವಿಶ್ವನಾಥ ಹಿರೇಮಠ, ವಿರೇಶ ಜೋಕುಮಾರ, ಎಸ್ ಎಸ್ ಲವಟೆ, ಲಕ್ಷಿö್ಮÃ ಶರ್ಮಾ, ವಿಜಯಲಕ್ಷ್ಮಿ ಕಲ್ಯಾಣಕರ ಮತ್ತಿತರಿದ್ದರು.
ಅನಿಲ್ ಗುನ್ನಾಪೂರ ಅವರ ಮೂರನೇ ಪುಸ್ತಕ “ಸರ್ವೆ ನಂಬರ್-೯೭” ಕಥಾಸಂಕಲನ ಬಿಡುಗಡೆ