VOJ ನ್ಯೂಸ್ ಡೆಸ್ಕ್: ವೈಧ್ಯರಿಗೆ ಅಚ್ವರಿ ಎನ್ನುವ ರೀತಿಯಲ್ಲಿ ಮಗು ಒಂದು ಜನಿಸಿದೆ. ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಜನಿಸಿದ ಮಗುವನ್ನು ನೋಡಲು ಆಸ್ಪತ್ರೆಯತ್ತ ಜನರು ಧಾವಿಸುತ್ತಿದ್ದಾರೆ.
ಹೌದು ಮಧ್ಯಪ್ರದೇಶದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆ, ಮೂರು ಕೈ ಇರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮುಗವನ್ನು ಇಂಧೋರ್ ನಲ್ಲಿರುವ ಯಶ್ವಂತ್ ರಾವ್ ಆಸ್ಪತ್ರಗೆ ದಾಖಲಿಸಲಾಗಿದೆ. ಮಗು ವೆಂಟಿಲೇಟರ್ ಸೌಲಭ್ಯದಿಂದ ಇದೀಗ ಉಸಿರಾಡುತ್ತಿದೆ ಎಂದು ವೈದ್ಯ ರಾಜೇಶ್ ಲಹೋಟಿ ತಿಳಿಸಿದ್ದಾರೆ. ಇಂತಹ ಮಗು ಜನಿಸುವದು ಅಪರೂಪ. ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.