ಕ್ರಿಸ್ತರಾಜ ಪದವಿಪೂರ್ವ ಕಾಲೇಜಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು : ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೋಂದಾದ ಕ್ರಿಸ್ಥರಾಜ ವಿದ್ಯಾ ಸಂಸ್ಥೆಯಲ್ಲಿನ ಮಕ್ಕಳು , ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1 ರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಾಧಕರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ವಾಣಿಜ್ಯ ವಿಭಾಗದಲ್ಲಿ ( BASCs) ಅತೀ ಹೆಚ್ಚು ಅಂಕಗಳನ್ನು ಪಡೆದ ಸಾನಿಕ ಹೆಚ್. ಪಿ 600 ಕ್ಕೆ 575 ಅಂಕಗಳು, ಪ್ರೀತಮ್ ಎಸ್ 600 ಕ್ಕೆ 574 ಅಂಕಗಳು, ಲಕ್ಷ್ಮಿ ಎನ್ 600 ಕ್ಕೆ 569 ಅಂಕಗಳು. ವಾಣಿಜ್ಯ ವಿಭಾಗ (HEBA) ವಿಭಾಗದಲ್ಲಿ ಶಮ್ಮ 600 ಕ್ಕೆ 565 ಅಂಕಗಳು, ಜಾನ್ಸಿ ಸೋಮಿಯ 600 ಕ್ಕೆ 552 ಅಂಕಗಳು, ಶ್ವೇತಾ ಎಲ್ 600 ಕ್ಕೆ 548 ಅಂಕಗಳು. ವಿಜ್ಞಾನ ವಿಭಾಗದಲ್ಲಿ ರಾಜೇಶ್ 600 ಕ್ಕೆ 549 ಅಂಕಗಳು, ದೀಪ ಎಸ್ 600 ಕ್ಕೆ 543 ಅಂಕಗಳು, ಪ್ರಿಯ ಎಂ 600 ಕ್ಕೆ 542 ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ಕ್ರಿಸ್ತರಾಜ ಕಾಲೇಜಿನ ವಿದ್ಯಾರ್ಥಿನಿ ಸಾನಿಕ ಎಚ್. ಪಿ 575 ಅಂಕಗಳನ್ನು ಪಡೆದು ಇಡೀ ಹನೂರು ತಾಲ್ಲೂಕಿಗೆ ಪ್ರಥಮ ಸ್ಥಾನ, ಪ್ರೀತಮ್ ಎಸ್ 574 ತಾಲ್ಲೂಕಿಗೆ ದ್ವಿತೀಯ ಸ್ಥಾನ, ಲಕ್ಷ್ಮಿ 569 ಅಂಕಗಳನ್ನು ಪಡೆದು ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜಿಗೆ ಒಟ್ಟು 38 ಡಿಸ್ಟಿಂಕ್ಷನ್, 117 ಪ್ರಥಮ ದರ್ಜೆ, 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ಇನ್ನುಳಿದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಾಲೇಜಿಗೆ ಹಾಗೂ ಹನೂರು ತಾಲ್ಲೂಕಿಗೆ ಕೀರ್ತಿ ತಂದ
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ವಂದನೀಯ ಸ್ವಾಮಿ ರೋಷನ್ ಬಾಬು ರವರು ಮತ್ತು ಉಪನ್ಯಾಸಕ ವರ್ಗದವರು ಸಾಧಕರಿಗೆ ಸಿಹಿ ತಿನ್ನಿಸುವ ಮೂಲಕ ಹರ್ಷ ವ್ಯಕ್ತಪಡಿಸಿ ಅವರ ಭವಿಷ್ಯ ಉಜ್ವಲವಾಗಲೆಂದು ಶುಭಾಶಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.



















