ಇಂಡಿಯ ನಾಯಕ ನಟ ಪಂಚಿ ನಟಿಸಿರುವ
ನಾ ನಿನ್ನ ಬಿಡಲಾರೆ ಚಿತ್ರ ಬಿಡುಗಡೆ
ಇಂಡಿ : ಚಲನಚಿತ್ರ ನಾಯಕ ಪಂಚಾಕ್ಷರಿ ಹಿರೇಮಠ ಪಂಚಿ ನಟಿಸಿರುವ ನಾ ನಿನ್ನ ಬಿಡಲಾರೆ ಚಿತ್ರ ಪಟ್ಟಣದ ಮಹಾವೀರ ಚಿತ್ರ ಮಂದಿರದಲ್ಲಿ ನ. ೨೯ ಇಂದು ತೆರೆ ಕಂಡಿತು.
ಪಟ್ಟಣದ ಮಹಾವೀರ, ವಿಜಯಪುರದ ಡ್ರೀಮಲ್ಯಾಂಡ ಸೇರಿದಂತೆ ರಾಜ್ಯಾದಂತ ಇಂದು ಬಿಡುಗಡೆಗೊಂಡಿದೆ
ಈಗಾಗಲೇ ನಾಯಕ ನಟ ಪಂಚಿಯವರು ತಮ್ಮ ಚಿತ್ರದ ತಂಡದೊAದಿಗೆ ಇಂಡಿಯಲ್ಲಿ ಮತ್ತು ವಿಜಯಪುರದಲ್ಲಿ ರೋಡ್ ಶೋ ಮಾಡಿ ಅಭಿಮಾನಿಗಳಿಗೆ ಚಿತ್ರದ ಮಾಹಿತಿ ನೀಡಿದ್ದರು. ಈಗಾಗಲೇ ರಂಗಭಿರAಗಿ, ಇದೇ ಅಂತರAಗ ಶುದ್ದಿ ಮತ್ತು ಕ್ರಷ ಮೂರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪಂಚಿ ಇವರಿಗೆ ಇದು ನಾಲ್ಕನೆಯ ಚಿತ್ರ.
ಒಂದುಕಾಲದಲ್ಲಿ ಅನಂತನಾಗ ಮತ್ತು ಲಕ್ಷಿö್ಮÃ ಅಭಿನಯಿಸಿರುವ ಸೂಪರ ಹಿಟ್ ಚಿತ್ರದ ಶಿರ್ಷಿಕೆ ಬಳಸಿಕೊಂಡು ಸಿದ್ಧವಾಗಿರುವ ಚಿತ್ರದ ಮೇಲೆ ಪ್ರೇಕ್ಷಕರು ತುಂಬಾ ಆಶಾಭಾವನೆ ಹೊಂಡಿದ್ದಾರೆ.ಹಳೆಯ ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ಬಿಡೆನು ನಿನ್ನ ಪಾದ ಹಾಡು ಸೂಪರ್ ಹಿಟ್ ಆಗಿತ್ತು. ಅದೇ ದಾರಿಯಲ್ಲಿ ಈ ಹೊಸ ಸಿನಿಮಾದ ಹಾಡು ಮೂಡಿ ಬಂದಿದೆ. ಈ ಹಾಡು ಈ ಸಿನಿಮಾಕ್ಕೆ ಆತ್ಮ ಎಂದು ನಾಯಕ ನಟ ಪಂಚು ಹೇಳಿದ್ದಾರೆ.ಭಾರತಿ ಬಾಳಿ ನಿರ್ಮಾಣದ ಈ ಚಿತ್ರದಲ್ಲಿ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕಿ ಭಾರತಿ ಬಾಳಿ ಉತ್ತರ ಕರ್ನಾಟಕದ ಕಲಬುರಗಿಯವರಾಗಿದ್ದು ಅವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅದ್ಬುತ ಕಥಾ ಹಂದರವಿರುವ ಹಾರರ್ ಚಿತ್ರವಿದು.ಇದರಲ್ಲಿ ಕಥೆಯೇ ಕಿಂಗ್. ಕನ್ನಡದಲ್ಲಿ ಉತ್ತಮ ಕಂಟೆAಟ್ ಇರುವ ಸಿನಿಮಾ ಬರಬೇಕು ಎನ್ನುವವರಿಗೆ ಇದು ಉತ್ತರವಾಗಿರುತ್ತದೆ. ಎಲ್ಲಾ ಕಲಾವಿಧರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.ಈ ಚಿತ್ರದ ಮೂಲಕ ನಮ್ಮ ಚಿತ್ರರಂಗಕ್ಕೆ ಒಬ್ಬ ಉತ್ತಮ ನಟ ಸಿಕ್ಕಿದ್ದಾರೆ. ಇದು ಅದ್ಬುತ ಸಿನಿಮಾ ನೋಡಿದನುಭವ ನೀಡುವದರಲ್ಲಿ ಸಂಶಯವಿಲ್ಲ. ಹಾರರ್ ಕಥೆಯನ್ನು ಭಾವನಾತ್ಮಕ ಹಾಗೂ ಮನರಂಜನಾತ್ಮಕ ಪ್ರೇಕ್ಷಕರಿಗೆನೀಡುವ ಸಿನಿಮಾವಿದು. ಪಂಚಿಯವರು ಮೇರು ನಟನಾಗಿ ಮೆರೆಯಲೆಂಬುದೇ ಇಂಡಿಯ ಅಭಿಮಾನಿಗಳ ಹಾರೈಕೆ.
ಕರ್ನಾಟಕ ಚಿತ್ರರಂಗದಲ್ಲಿ ನಾ ನಿನ್ನ ಬಿಡಲಾರೆ ಯಂಥ ವಿಶೇಷ ಕಥಾಹಂದರದ ಸಿನಿಮಾ ಅಪರೂಪ. ಪ್ರತಿಯೊಬ್ಬರಿಗೂ ಇಷ್ಟವಾಗುವಂತೆ ಈ ಚಿತ್ರ ಬಂದಿದೆ.
ಪಂಚಿ ಉರ್ಫ ಪಂಚಾಕ್ಷರಿ ಹಿರೇಮಠ ನಾಯಕ ನಟ ನಾ ನಿನ್ನ ಬಿಡಲಾರೆ ಚಿತ್ರ
ಇಂಡಿಯ ನಟ ಪಂಚಿ ಅಭಿನಯದ ಚಿತ್ರ ನಾ ನಿನ್ನ ಬಿಡಲಾರೆ ಚಿತ್ರದ ಪೋಸ್ಟರಗಳು