ವಿಜಯಪುರ : ಹೆಂಡತಿ ಜಮೀನು ಮಾರಲು ಒಪ್ಪದಕ್ಕೆ ಪಾಪಿ ತಂದೆ ಎಗ್ ರೈಸ್ ನಲ್ಲಿ ವಿಷ ಬೆರೆಸಿ ಮಗ ಹಾಗೂ ಮಗಳಿಗೆ ನೀಡಿದ ಪರಿಣಾಮ ಮಗ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ಮಗ ಶಿವರಾಜ್ ಅರಸನಾಳ (2) ಸಾವನ್ನಪ್ಪಿದ್ದಾನೆ. ಇನ್ನು ರೇಣುಕಾ(5) ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಇನ್ನು ಆರೋಪಿ ಚಂದ್ರಶೇಖರ ಮೈತುಂಬ ಸಾಲ ಮಾಡಿಕೊಂಡಿದ್ದ. ಅದಕ್ಕಾಗಿ ಹೆಂಡತಿ ಜಮೀನು ಮಾರುವುದಕ್ಕೆ ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‌ರೈಸ್‌ನಲ್ಲಿ ವಿಷ ಹಾಕಿದ್ದಾನೆ. ಚಂದ್ರಶೇಖರ್ ಅರಸನಾಳ ವಿರುದ್ಧ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.