ರೈತರಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಮುಖ್ಯ
ಇಂಡಿ : ಮಣ್ಣುಗಳಲ್ಲಿಯ ಮುಖ್ಯ ಹಾಗೂ ಲಘು ಪೋಷಕಾಂಶಗಳ ಕೊರತೆ ಮತ್ತು ನೀರಿನಲ್ಲಿ ಲವಣಗಳು ಮತ್ತು ಕ್ಷಾರಗಳ ಕೊರತೆ ನೀಗಿಸಲು ರೈತರು ತಮ್ಮ ಹೊಲದಲ್ಲಿಯ ಮಣ್ಣು ಪರೀಕ್ಷೆಯ ಅಗತ್ಯತೆ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಣ್ಣು ನೈಸರ್ಗಿಕವಾಗಿ ದೊರೆತಂತಹ ಅತ್ಯಮೂಲ್ಯ ವಸ್ತು. ಭೂಮಿಯು ಸಸ್ಯಗಳಿಗೆ ಆಧಾರವನ್ನು ಕೊಡುವದರ ಜೊತೆಗೆ ಅದರ ಬೆಳವಣೆಗೆಗೆ ಅವಶ್ಯವಿರುವ ನೀರು ಮತ್ತು ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಆದ್ದರಿಂದ ಬೆಳೆಗಳ ಉತ್ತಮವಾದ ಬೆಳೆವಣೆಗಾಗಿ ಹಾಗೂ ಪೋಷಕಾಂಶ ಕೊರತೆ ನಿವಾರಿಸಲು ಪೋಷಕಾಂಶಗಳ ಪ್ರಮಾಣ ಮತ್ತು ರೂಪವನ್ನು ಮಣ್ಣು ಪರೀಕ್ಷೆಯು ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರು.
ವಿಜ್ಞಾನಿ ಡಾ. ಹೀನಾ ಮಾತನಾಡಿ ಒಂದೇ ವ್ಯವಸಾಯ ಜಮೀನಿನಲ್ಲಿ ನಿರಂತರವಾಗಿ ಬೆಳೆ ಬೆಳೆಯುವರಿಂದ ಮಣ ್ಣನಲ್ಲಿರುವ ಪೋಷಕಾಂಶಗಳೆಲ್ಲ ಬೆಳೆಗಳ ಬೆಳವಣೆಗೆಗಾಗಿ ಉಪಯೋಗವಾಗಿ ಮಣ ್ಣನಲ್ಲಿ ಪೋಷಕಾಂಶಗಳ ಪ್ರಮಾಣ ಕ್ಷೀಣ ಸುತ್ತಾ ಬರುತ್ತದೆ. ಬೆಳೆ ಬೆಳೆದ ನಂತರ ಕೃಷಿ ಚಟುವಟಿಕೆಗಳಾದ ಮಾಗಿ ಉಳುಮೆ ಮುಂತಾದವುಗಳನ್ನು ಕೈ ಕೊಳ್ಳದಿದ್ದರೆ ಭೂಮಿಯ ಮೇಲ್ಪದರ ಗಟ್ಟಿಯಾಗಿ ಮಣ ್ಣನ ಭೌತಿಕ ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಕಂಡು ಬಂದು ಮಣ್ಣು ನಿಷ್ಕಿçÃಯ ವಾಗುತ್ತದೆ. ಈ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಅಗತ್ಯ ಎಂದರು.
ಮಣ್ಣು ಮತ್ತು ನೀರು ಪರೀಕ್ಷೆ ವಿಜ್ಞಾನಿ ಡಾ. ಬಾಲಾಜಿ ನಾಯಕ ಮಾತನಾಡಿ ಉತ್ತಮ ಬೆಳೆಗೆ ಯೋಗ್ಯವಾದ ನೀರು ಅವಶ್ಯಕ,ಇಂದಿನ ಕೃಷಿಯಲ್ಲಿ ಅಸಮತೋಲನ ಅಸಮರ್ಪಕ ರಸಾಯನಿಕ ಗೊಬ್ಬರಗಳ ಬಳಕೆಯಿಂದ ವ್ಯವಸಾಯದಲ್ಲಿ ಬಳಸುವ ನೀರು ಯೋಗ್ಯವಾಗಿದೆಯೋ ಇಲ್ಲವೋ ಮತ್ತು ಅದರ ಗುಣಮಟ್ಟ ಪರೀಕ್ಷಿಸುವದು ಅಗತ್ಯ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಕಾಶ, ಮುಖ್ಯ ಗುರುಗಳಾದ ಎ.ಎಸ್.ಬೋರಾಮಣ , ಶಿಕ್ಷಕಿ ಸುರೇಖಾ ಭೈರಶೆಟ್ಟಿ ಮತ್ತಿತರಿದ್ದರು.
ಇಂಡಿ ಕೃಷಿ ವಿಜ್ಞಾನ ಕೇಂದ್ರದ ಎದುರು ಕರ್ನಾಟಕ ಇಂಗ್ಲೀಷ ಶಾಲೆಯ ವಿದ್ಯಾರ್ಥಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ