ಇಂಡಿ : ಜಮೀನಿಗೆ ನೀರು ಹಾಯಿಸಲು ಹೋಗಿದ ವೇಳೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ರೈತನೋರ್ವ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಾವಿನಹಳ್ಳಿ ರಸ್ತೆಯ ತೆಗ್ಗಿಹಳ್ಳಿ ತೋಟದ ವಸ್ತಿಯಲ್ಲಿ ನಡೆದಿದೆ. ಮಾಳಪ್ಪ ರಾಮಣ್ಣ ಹೂಗಾರ (25) ಮೃತಪಟ್ಟಿರುವ ದುರ್ದೈವಿ. ಕೃಷಿ ಜಮೀನಿನಲ್ಲಿ ನೀರು ಹಾಯಿಸುವ ವೇಳೆ ಹಾವು ಕಚ್ಚಿದೆ. ಇನ್ನು ಮಾಳಪ್ಪನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.