ಇಂಡಿ : ತಾಲೂಕಿನಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿಗಾಗಿ ಹಾಹಾಕಾರವಿದ್ದು, ಸರ್ಕಾರ ಹಾಗೂ ಕೆ.ಪಿ.ಟಿ.ಸಿ.ಎಲ್, ಅಧಿಕಾರಿಗಳು ಕಳೆದ ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಡಿತಗೂಳಿಸಿದ್ದಾರೆ. ಇದರಿಂದ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಬಿ.ಡಿ ಪಾಟೀಲ ನೇತೃತ್ವದಲ್ಲಿ ಇಂದು ಸಾಹಾಯಕ ಕಾರ್ಯಪಾಲಕ ಅಭಿಯಂತರಾದ ಎಸ್ಎ. ಬಿರಾದರವರಿಗೆ ಮನವಿ ಸಲ್ಲಿಸಿದರು.
ಜಿಡಿಎಸ್ ಮುಖಂಡ ಬಿ.ಡಿ ಪಾಟೀಲ ಮಾತನಾಡಿ, ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ವೇಳೆ ಅಭ್ಯಾಸ ಮಾಡಲು ಕಷ್ಟವಾಗುತ್ತಿದೆ. ರೈತರಿಗೆ ನೀರುಣಿಸುವ ವೇಳೆ ವಿಷ ಸರ್ಪಗಳ ಕಡಿತದಿಂದ ಜೀವಕ್ಕೆ ಅಪಾಯವಿದ್ದು ಕೂಡಲೆ ಸಿಂಗಲ್ ಫೇಸ್ ವಿದ್ಯುತ್ ಕಡಿತಗೂಳಿಸಿದ ಸರ್ಕಾರ ಕೂಡಲೇ ತಮ್ಮ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿದರು.
ಹೋರಾಟದಲ್ಲಿ ಮರೆಪ್ಪ ಗಿರಣಿವಡ್ಡರ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಹಣಮಂತ ಹೂನಳ್ಳಿ, ಗ್ರಾಂ ಪಂ. ಸದಸ್ಯ ಶಿವಾನಂದ ಹಂಜಗಿ, ರಾಜು ಮುಲ್ಲಾ, ಶಾಮ ಪೂಜಾರಿ, ದುಂಡು ಬಿರಾದಾರ, ಭಾಷಾ ಇಂಡಿಕರ, ಸಂಜು ಪಾಯಕರ, ಬಸವರಾಜ ಹಂಜಗಿ, ನಿಯಾಝ್ ಅಗರಖೇಡ, ಪಿಂಟು ಜಾದವ್, ಮೌಲಾಸಾಬ ಲಿಂಗಸೂರ, ಸಾಬಯಲಾಲ ಚಬನೂರ, ಮಾಳು ಮ್ಯಾಕೇರಿ, ಸಿದ್ದು ಬಿರಾದಾರ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.