ಇಂಡಿಯಲ್ಲಿ ಸಿದ್ದೇಶ್ವರ ಶ್ರೀಗಳಿಗೆ “ಕಾವ್ಯ’ ಹಾಗೂ ‘ಗೀತ’ ನಮನ..!
ಇಂಡಿ : ಸಿದ್ದೇಶ್ವರ ಶ್ರೀಗಳಿಗೆ ” ಕಾವ್ಯ’ ಹಾಗೂ ‘ಗೀತ’ ನಮನ ಕಾರ್ಯಕ್ರಮ 12 ಅಗಸ್ಟ್ ಬೆಳಿಗ್ಗೆ 9:30 ಕ್ಕೆ ಜಿ ಆರ್ ಜಿ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ್ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದರು.
ಪಟ್ಟಣದ ಪ್ರತಿಷ್ಠಿತ ಜಿ.ಆರ್.ಜಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್ ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಉದ್ಘಾಟನೆ ಎಸ್ ಎಸ್ ವ್ಹಿ ವ್ಹಿ ಸಂಘದ ಕಾರ್ಯದರ್ಶಿ ಪ್ರಭಾಕರ್ ಬಗಲಿ ನೆರೆವರಿಸಲಿದ್ದಾರೆ ಇನ್ನೂ ಮುಖ್ಯ ಅತಿಥಿಯಾಗಿ ಪ್ರೋ ರವಿಕುಮಾರ್ ಅರಳಿ ಸಹಾಯಕ ಪ್ರಾಧ್ಯಾಪಕ ಸರಕಾರಿ ಪ್ರಥಮ ಕಾಲೇಜು ಝಳಕಿ, ಎಸ್ ಎಸ್ ವ್ಹಿ ವ್ಹಿ ಸಂಘದ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಸರಕಾರ ನೌಕರ ತಾಲ್ಲೂಕು ಸಂಘದ ಅಧ್ಯಕ್ಷ ಎಸ್ ಡಿ ಪಾಟೀಲ, ಎಸ್ ವ್ಹಿ ಹರಳಯ್ಯ, ಡಾ || ರಮೇಶ್ ಕತ್ತಿ , ಗಂಗಾಬಾಯಿ ಗಲಗಲಿ, ಎಸ್ ಜಿ ವಾಲಿ, ಎಸ್ ಬಿ ಜಾಧವ ಪಾಲ್ಗೊಳಲಿದ್ದಾರೆ ಎಂದು ಹೇಳಿದರು.
ಅದಲ್ಲದೇ ತಾಲೂಕಿನ ಸುಮಾರು 100 ಕ್ಕೂ ಹೆಚ್ಚು ಕವಿಗಳು, ಸಾಹಿತಿಗಳು ಮತ್ತು ಕಾಲೇಜು ವಿಧ್ಯಾರ್ಥಿಗಳು ಪಾಲ್ಗೊಳಲಿದ್ದಾರೆ.