ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ : ಶ್ರೀಕಂಠ ಶಿವಾಚಾರ್ಯರರು
ಇಂಡಿ: ದುಂದು ವೆಚ್ಚ ಮಾಡದೇ ಪೂಜ್ಯರ, ಗಣ್ಯರ
ಮತ್ತು ನೂರಾರು ಜನರ ಮಧ್ಯೆ ನಡೆಯುವ
ಮದುವೆ ಭಾಗ್ಯವಂತರ ಮದುವೆ ಎಂದು ನಾಗಣಸೂರದ
ಪೂಜ್ಯ ಶ್ರೀ ಶ್ರೀಕಂಠ ಶಿವಾಚಾರ್ಯರರು ಹೇಳಿದರು.
ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಜಾತ್ರಾ
ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ದೇವಸ್ಥಾನ
ಟ್ರಸ್ ಕಮೀಟಿ ಹಾಗೂ ಶ್ರೀ ಶಾಮಥೆಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ
ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು
ಮಾತನಾಡಿ, ಬಡವರ ಪರಹಿತ ಬಯಸುವವರು
ಪರಮಾತ್ಮನ ಸ್ವರೂಪಿಗಳು. ಅವರು ಸಮಾಜದ
ಮಕ್ಕಳು. ಅವರು ಮಾಡುವ ಸಾಮೂಹಿಕ ಮದುವೆ
ನಮ್ಮ ಧರ್ಮ, ಸಂಸ್ಕಾರ, ನೀತಿ ಬೋಧಿಸುತ್ತದೆ
ಎಂದರು. ಜೈನಾಪುರದ ರೇಣುಕಾಶಿವಾಚಾರ್ಯರರು ಮಾತನಾಡಿ, ಮದುವೆ ಭಾರತೀಯ ಸಂಸ್ಕøತಿಯಲ್ಲಿ ಶತ
ಶತಮಾನದಿಂದ ಬಂದಿದ್ದು ಇತ್ತಿತಲಾಗಿ ಜನರು ಮದುವೆ
ದುಂದು ವೆಚ್ಚದಿಂದ ಮಾಡುತ್ತಿದ್ದು ಸಂಸಾರಗಳಿಗೆ
ಮಾರಕವಾಗುತ್ತಿದೆ ಎಂದರು. ಪ್ರವಚನಕಾರ ಗೌಡಗಾಂವದ ಶಾಂತವೀರಶಿವಾಚಾಯ್ರರು ಮಾತನಾಡಿ, ಮದುವೆಗಳಿಗೆ ದುಂದುವೆಚ್ಚ ಮಾಡುತ್ತಿದ್ದು ಬಡವರು ದುಂದು ವೆಚ್ಚದ ಮದುವೆಗೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಹೀಗಾಗಿ ಸಾಮೂಹಿಕ ಮದುವೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ
ಪಾಲ್ಗೊಳ್ಳುವವರಿಗೆ ಮಂಗಳಸೂತ್ರ(ತಾಳಿ) ಅದಕ್ಕೆ
ಬೇಕಾಗುವ ಬಂಗಾರ, ಬಟ್ಟೆ ಸೇರಿದಂತೆ ಸಂಬಂದಿಗಳಿಗೆ
ಊಟದ ವ್ಯವಸ್ಥೆ ಶ್ರೀ ಶಾಂತೇಶ್ವರ ಸಮಿತಿಯವರೇ
ಮಾಡಿದ್ದಾರೆ ಎಂದರು. ಗೋರನಾಳದ ವೀರಪಾಕ್ಷ
ದೇವರು, ಸಿದ್ದು ಲಾಳಸಂಗಿ ಮಾತನಾಡಿದರು. ಈ ಬಾರಿಯ ಸಾಮೂಹಿಕ ವಿವಾಹದ ವೆಚ್ಚವನ್ನು ಸಿದ್ದಣ್ಣ ತಾಂಬೆ ವಹಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ
ಸಮಿತಿಯವರು ಒಂದು ತಿಂಗಳ ನಡೆದ ಪ್ರವಚನ
ಮತ್ತು ಜಾತ್ರೆಯ ನಿಮಿತ್ಯ ಪ್ರಸಾದ ವ್ಯವಸ್ಥೆ
ಮಾಡಿದರು.
ವೇದಿಕೆಯ ಮೇಲೆ ರೇಣುಕಾ ಶಿವಾಚಾರ್ಯರರು ಅರ್ಜುಣಗಿ, ಹಿರೇಬೇವನೂರ ಮಾತೋಶ್ರೀ ಶರಣಮ್ಮ ತಾಯಿ, ರೋಡಗಿಯ ಶಿವಲಿಂಗೇಶ್ವರ ಶಿವಾಚಾರ್ಯರರು, ಬಿ.ಎಲ್.ಡಿ.ಈ ವೈಧ್ಯಕೀಯ ಮಹಾವಿದ್ಯಾಲಯದ ಡಾ|| ಮಂಜುನಾಥ ಕೊಟೆಣ್ಣವರ, ಶಾಂತೇಶ್ವರ ಸಲಗರ, ಜೈನ ಸಮಾಜದ ಗುರುಗಳಾದ ಅಶೋಕ ಪಂಡಿತ, ಶ್ರೀಕಾಂತ ದೇವರ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಭೀಮನಗೌಡ ಪಾಟೀಲ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸಿಡಿಪಿಒ ಗೀತಾ ಗುತ್ತರಗಿಮಠ, ಈರಣ್ಣ ಮೈದರಗಿ, ಭೀಮರಾಯ
ಮದರಖಂಡಿ, ರಾಜಶೇಖರ ಗುರುಗಳು, ಬಿ.ಕೆ.ಮಸಳಿ
ವಕೀಲರು, ಪ್ರಕಾಶ ಬಿರಾದಾರ ಮತ್ತಿತರಿದ್ದರು.
ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ಪಾಲ್ಗೊಂಡಿದ್ದರು. ಸಹಸ್ರಾರು ಜನರ ಮಧ್ಯೆ ಅಕ್ಷತಾರೋಹಣ ನಡೆಯಿತು.
ಇಂಡಿ: ಪಟ್ಟಣದ ಶ್ರೀ ಶಾಂತೇಶ್ವರ ಜಾತ್ರಾ ನಿಮಿತ್ಯ ಶ್ರೀ
ಶಾಂತೇಶ್ವರ ಗುಡಿಯ ಹತ್ತಿರ ನಡೆದ ಮೈದಾನದಲ್ಲಿ
ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು
ಪೂಜ್ಯರು, ಗಣ್ಯರು ಉದ್ಘಾಟಿಸಿದರು.
ಇಂಡಿ: ಸರಳ ಸಾಮೂಹಿಕವಿವಾಹದಲ್ಲಿ 11 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.