ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು..
ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಅಂತಿಮ ವರ್ಷದ ವಿಧ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ..
ಇಂಡಿ : ಆರೋಗ್ಯ ಸೇವೆ ಮಾಡುವುದಕ್ಕೆ ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ನಿಮಗೆ ಸಿಕ್ಕಿದ್ದು, ನೊಂದ ಜೀವಗಳಿಗೆ ಸ್ಪಂದಿಸುವ ಮನಸ್ಸು, ನಿಸ್ವಾರ್ಥ ಸೇವೆಯ ಮನೋಭಾವ ನಿಮ್ಮಲ್ಲಿರಬೇಕು ಎಂದು ಸಂಸ್ಥೆಯ ಅಧ್ಯಕ್ಷ, ನ್ಯಾಯಾವಾದಿ ಎಸ್ ಬಿ ಕೆಂಬೋಗಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿಧ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಮಾತಾನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣವು ಎಲ್ಲಾ ಸಂಪತ್ತುಗಳಿಗಿಂತ ವಿದ್ಯಾ ಸಂಪತ್ತು ಪರಮ ಶ್ರೇಷ್ಠವಾದುದು. ದುಡ್ಡೆ ದೊಡ್ಡಪ್ಪ, ಆದರೆ ವಿದ್ಯೆ ಅದರಪ್ಪ ಎಂಬುದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿ ಪರ ಕೋರ್ಸಗಳು ಜೀವನದಲ್ಲಿ ಬದಕಲು ಪಾಠವನ್ನು ಕಲಿಸುತ್ತವೆ. ಯಾವತ್ತು ವೃತ್ತಿ ಪರ ಕೋರ್ಸಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಸೌಮ್ಯ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಈಗಿನ ಯುಗದಲ್ಲಿ ಸಾಕಷ್ಟು ಜ್ಞಾನ ಪಡೆದುಕೊಳ್ಳಲು ಶ್ರಮ ಪಡೆಯುವ ಅಶ್ಯಕತೆ ಇಲ್ಲ. ಅಂತರ್ಜಾಲದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತದೆ. ನಮ್ಮ ದೇಹದ ಹೊರಗಿನ ಕಣ್ಣುಗಳು ಹೊರ ಜಗತ್ತನ್ನು ಮಾತ್ರ ಕಾಣಬಲ್ಲ ಆದರೆ ಜ್ಞಾನವು ಜಗತ್ತನೆ ಸೃಷ್ಠಿಸುತ್ತದೆ. ಎಸ್ ಎಸ್ ಪ್ಯಾರಾ ಮೆಡಿಕಲ್ ಸಂಸ್ಥೆಯು ‘ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಮೆಡಿಕಲ್ ಕೋರ್ಸ್ ಆರಂಭಿಸಿದೆ. ಈ ಕೋರ್ಸ್ ಪೂರೈಸಿದವರಿಗೆ ಸ್ಥಳೀಯ ಮತ್ತು ದೇಶ ವಿದೇಶಲ್ಲೂ ಸೇವೆ ಮಾಡಬಹುದು. ಅದರಂತೆ ಅಮೆರಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯೋಗಾವಕಾಶಗಳು ವಿಫುಲ ವಾಗಿವೆ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ, ಡಾ. ಸಾಗರ ಪಾಟೀಲ, ಪುಷ್ಪಾ ಪೋದ್ದಾರ, ಶ್ವೇತಾ ದೋತ್ರೆ, ಶ್ರೀಶೈಲ ಹುಗಾರ ,ಮುಕ್ತಮ ಮುಲ್ಲಾ ಡಾ.ಸುನೀಲಕುಮಾರ ಸರಸಂಬಿ ಹಾಗೂ ವಿದ್ಯಾರ್ಥಿಗಳು ವಾಗವಹಿದರು.