ಶ್ರೀರಾಮ, ಲಕ್ಷ್ಮಣ, ಸೀತೆ, ರಾವಣ ವೇಷ ಭೂಷಣ ಧರಿಸಿದ ಶಾಲಾ ಮಕ್ಕಳು..! ಎಲ್ಲಿ ಅಂತಿರಾ..?
ಇಂಡಿ: ಪಟ್ಟಣದ ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೋಮವಾರರಂದು ಮಕ್ಕಳಿಗೆ ಶ್ರೀರಾಮ, ಲಕ್ಷ್ಮಣ, ಸೀತೆ, ರಾವಣ ಹನುಮಂತ ವೇಷ ಭೂಷಣ ತೊಡಿಸಿ ರಾಮಾಯಣದ ಕಿರುನಾಟಕ, ನೃತ್ಯ, ಕಥೆ, ಕವನ ಪ್ರಬಂಧ, ಹೀಗೆ ಅನೇಕ ಚಟುವಟಿಕೆಗಳನ್ನು ಮಾಡಿಸಲಾಯಿತು.
ಶ್ರೀ ರಾಮನ ಫೊಟೋ ಪೂಜೆ ಮಾಡಿ ಮಕ್ಕಳಿಗೆ
ಶ್ರೀರಾಮನಲ್ಲಿ ಇರುವ ಮೌಲ್ಯ ತಿಳಿಸಲಾಯಿತು. ಎಸ್.ಆರ್.ಬಗಲೂರ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಈ ದಿನಮಾನದಲ್ಲಿ ಮಕ್ಕಳಿಗೆ ನೈತಿಕ ಗುಣಮಟ್ಟ ಕಡಿಮೆ ಆಗುತ್ತಿದ್ದು ಅವರಲ್ಲಿ ತಂದೆ, ತಾಯಿ ಗುರು, ಹಿರಿಯರನ್ನು ಪೂಜಿಸುವ ಗುಣ ಬರಬೇಕಾದರೆ ಹೀಗೆ ಅನೇಕ ಆಚರಣೆಗಳು ಮಾಡಿ ತಿಳಿಸಬೇಕು
ಎಂದರು.
ಚಿದಾನಂದ ಬಿರಾದಾರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಶ್ರೀ ರಾಮ ರಾಜನಿದ್ದರೂ ಕೂಡಾ ಪ್ರಜೆಗಳ ಒಳಿತಿಗಾಗಿ ಸಾಮ್ರಾಜ್ಯ ತೊರೆದು ವನವಾಸಕ್ಕೆ ಹೋದರು. ಆದ್ದರಿಂದ ಶ್ರೀಮಂತಿಕೆ ಅನ್ನೋದು ಇದ್ದಾಗ ಅದರಲ್ಲಿಯೇ ಸ್ವಲ್ಪ ಬಡವರ, ದೀನರಿಗೆ ಹಂಚಿ ಸಂತೋಷ ಪಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಶಹನವಾಜ ಚಡಚಣಕರ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವಿಜಯಕುಮಾರ ಇಮ್ಮನದ ನಿರೂಪಿಸಿದರು, ಸಲ್ಮಾ ಚಿಕ್ಕೇರಿ ಅವರು
ವಂದಿಸಿದರು.
ಇಂಡಿ: ಪಟ್ಟಣದ ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೋಮವಾರರಂದು ಶ್ರೀರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.