ವಿಜ್ಞಾನ ದಿನಾಚರಣೆ ವೈಜ್ಞಾನಿಕ ಆಸಕ್ತಿ, ಅನ್ವೇಷಣೆ, ಆವಿಷ್ಕಾರಗಳನ್ನು ಸಂಭ್ರಮಿಸುವ ದಿನ..
ಇಂಡಿ : ಭಾರತೀಯ ವಿಜ್ಞಾನ ದಿನಾಚರಣೆ ವೈಜ್ಞಾನಿಕ ಆಸಕ್ತಿ, ಅನ್ವೇಷಣೆ, ಆವಿಷ್ಕಾರಗಳನ್ನು ಸಂಭ್ರಮಿಸುವ ದಿನ ಎಂದು ಎಸ್ ಡಿ ಎಮ್ ಸಿ ನೂತನ ಅಧ್ಯಕ್ಷ ರಾಜಶೇಖರ ಪಾತಾಳಿ ಮಾತನಾಡಿದರು.
ತಾಲ್ಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
ನಮ್ಮ ಜೀವನವನ್ನು ರೂಪಿಸುವಲ್ಲಿ ಮತ್ತು ಸಂಕೀರ್ಣ ಸವಾಲುಗಳನ್ನು ಬಗೆಹರಿಸುವಲ್ಲಿ ವಿಜ್ಞಾನ ಹೊಂದಿರುವ ಅಪರಿಮಿತ ಸಾಮರ್ಥ್ಯದ ಕುರಿತು ನಮ್ಮನ್ನು ನೆನಪಿಸುತ್ತದೆ. ರಾಮನ್ ಪರಿಣಾಮದ ಅನ್ವೇಷಣೆಯ ಮೂಲಕ, ಭಾರತೀಯ ಭೌತಶಾಸ್ತ್ರಜ್ಞರಾದ ಸರ್ ಸಿ ವಿ ರಾಮನ್ ಅವರು ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸುಜಾತ ಜಾಧವ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ, ರಾಷ್ಟ್ರೀಯ ವಿಜ್ಞಾನ ದಿನ ಎಲ್ಲ ಭಾರತೀಯರೂ ಒಂದಾಗಿ, ವಿಜ್ಞಾನದ ಶಕ್ತಿಯನ್ನು ಸಂಭ್ರಮಿಸುವ ಸಂದರ್ಭವಾಗಿದೆ. ಇದು ವೈಜ್ಞಾನಿಕ ಸಾಧನೆಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ, ವೈಜ್ಞಾನಿಕ ಆಲೋಚನೆಯನ್ನು ಉತ್ತೇಜಿಸುತ್ತದೆ, ಮತ್ತು ಭಾರತದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಬೆಂಬಲ ನೀಡುತ್ತದೆ. ವಿಜ್ಞಾನ ದಿನದಂದು ಭಾರತದಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು, ವಿಚಾರ ಗೋಷ್ಠಿಗಳು, ಕಾರ್ಯಾಗಾರಗಳು, ಮತ್ತು ಸಾರ್ವಜನಿಕ ಉಪನ್ಯಾಸಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಿ ಎನ್ ಜಂಬಗಿ ಆರ್ ಡಿ ಪಾಟೀಲ, ಅಣ್ಣಾರಾಯ ಬಮ್ಮನಳ್ಳಿ ವಹಿಸಿದ್ದರು. ಕಾರ್ಯಕ್ರಮ ಘನ ಅಧಕ್ಷತೆ ಶ್ರೀ ದಯಾನಂದ ಮ ಹಿರೇಮಠ ವಹಿಸಿದ್ದರು ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ಯುವ ಮುಖಂಡರು ಉಪಸ್ಥಿತರಿದ್ದರು.