ಮುದಗಲ್ ತಾಲೂಕಾ ಕೇಂದ್ರಕ್ಕೆ ಒತ್ತಾಯ:
ಮೂಲಭೂತ ಸೌಕರ್ಯಕ್ಕಾಗಿ ಆಗ್ರಹ:
ಸಂಘಟನೆಗಳ ಹೋರಾಟ ಬರೀ ಕನಸು:
ಲಿಂಗಸೂಗೂರು: ಆ ಪಟ್ಟಣ ತಾಲೂಕಾ ಕೇಂದ್ರವಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಆದರೆ ಜನಪ್ರತಿನಿಧಿಗಳ ಇಚ್ವಾಸಕ್ತಿ ಕೊರತೆಯಿಂದ ಆ ಪಟ್ಟಣ ಕೇವಲ ಪಟ್ಟಣವಾಗಿ ಉಳಿದಿದೆ. ಕಳೆದ ಹತ್ತಾರು ವರ್ಷಗಳಿಂದ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. ಆದರೆ ತಾಲೂಕು ರಚನೆಗೆ ಸಂಘಟನೆಗಳ ಕನಸು ಬರೀ ಕನಸಾಗಿಯೇ ಉಳಿದಿದೆ.
ಹೌದು ಲಿಂಗಸೂಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣವನ್ನು ತಾಲೂಕಾ ಕೇಂದ್ರ ಮಾಡಲು ಕರವೇ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದೆ. ಆದರೂ ಪ್ರಯೋಜನವಾಗಿಲ್ಲ.
ಅಲ್ಲದೆ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಪಟ್ಟಣಕ್ಕೆ 7-8 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಕೊನೆಗೆ ಎರಡು ದಿನಗಳಿಗೊಮ್ಮೆ ಸಮರ್ಪಕವಾಗಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕರವೇ ಅಧ್ಯಕ್ಷ ಎಸ್ ಎ ನಯೀಮ್ ಜುನಾದಿ ನೇತೃತ್ವದಲ್ಲಿ ಪದಾಧಿಕಾರಿಗಳು ಶಾಸಕ ಮಾನಪ್ಪ ವಜ್ಜಲ್ ಗೆ ಮನವಿ ಮಾಡಿದರು.
ಅಲ್ಲದೆ ಮುದಗಲ್ ತಾಲೂಕು ರಚನೆಗೆ ಮುಖ್ಯಮಂತ್ರಿಗಳ ಬಳಿ ನಿಯೋಗ, ಹಾಗೂ ಸ್ವಾಗತ ಕಮಾನುಗಳವರೆಗೆ ಡಿವೈಡರ್ ರಸ್ತೆ ನಿರ್ಮಿಸಬೇಕು. ಇನ್ನು ಐತಿಹಾಸಿಕ ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕೆಂದು ಎರಡು ದಶಕದಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ತಾಲೂಕು ಆಗದೆ ವಂಚಿತವಾಗಿದೆ. ಆದಷ್ಟು ಬೇಗ ಮುದಗಲನ್ನು ತಾಲೂಕಾ ಕೇಂದ್ರವೆಂದು ಘೋಷಿಸಿಬೇಕು ಎಂದು ಮನವಿ ಸಲ್ಲಿಸಲಾಯಿತು.
ವರದಿ: ವೀರೇಶ್ ಅರಮನಿ ವಾಯ್ಸ್ ಆಫ್ ಜನತಾ