ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳಿಂದ ಸರ್ಕಾರದ ಮೇಲೆ ಒತ್ತಡ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ
ರಾಜ್ಯ ಸರಕಾರಿ ನೌಕರರ 7 ನೇ ವೇತನ ಹಾಗೂ ಒಪಿಎಸ್ ಜಾರಿಗೆಗೊಳಿಸುವ ಬಗ್ಗೆ ಸರಕಾರ ಗಮನ ಸೆಳೆಯಲು ಶಾಸಕ ಪಾಟೀಲ ರಿಗೆ ಮನವಿ
ಇಂಡಿ : 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಹಾಗೂ ಒಪಿಎಸ್ ಜಾರಿಗೆ ಗೊಳಿಸುವುದು ಸೇರಿದಂತೆ ಕೆಲವು ಪ್ರಮುಖ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಮನವಿ ಸಲ್ಲಿಸಿದರು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ತೆರಳಿದ ನೌಕರಸ್ಥ ಸದಸ್ಯರು, ರಾಜ್ಯದ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸಂಘದ ಬೇಡಿಕೆ ಈಡೇರಿಕೆಗೆ, ವರದಿ ಜಾರಿಗೆ ಬಗ್ಗೆ ಮನವಿ ಮಾಡಿದರು.
ಈ ಸಂಘಟನೆ ರಾಜ್ಯದ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ, 183 ತಾಲೂಕುಗಳಲ್ಲಿ ಸಂಘವು ಶಾಖೆಗಳನ್ನು ಹೊಂದಿದೆ. 6 ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಬೃಹತ್ ಸಂಘಟನೆ ಇದಾಗಿದೆ. ರಾಷ್ಟ್ರ, ರಾಜ್ಯದಲ್ಲಿ ಘಟಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆಯಾಗಿದೆ. ರಾಜ್ಯದಲ್ಲಿ 2.60 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಹೆಚ್ಚುವರಿ ಒತ್ತಡದೊಂದಿಗೆ ಈಗಿರುವ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದ ಎಲ್ಲ ಯೋಜನೆ ಶ್ರೀಸಾಮಾನ್ಯನಿಗೆ ತಲುಪಿಸಿ, ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ, ಜಿ ಎಸ್ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರ ಪಾತ್ರ ಬಹಳ ಮುಖ್ಯ ವಾಗಿದೆ. ಕಾರ್ಯಾಂಗದ ನೌಕರರ ಬೇಡಿಕೆ ಪೂರೈಸುವ ಜವಾಬ್ದಾರಿ ಸರಕಾರದಾಗಿದೆ.
ಬೇಡಿಕೆ ಈಡೇರಿಕೆ ವಿಳಂಬ : 7ನೇ ವೇತನ ಆಯೋಗದ ವರದಿಯ ಜಾರಿ ತನ್ನಿ..!
ಪ್ರಮುಖ ಅಂಶಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದು, ಇದರ ಜೊತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಅನುಷ್ಠಾನಗೊಳಿಸಬೇಕು ಎನ್ನುವ ನ್ಯಾಯಯುತ ಬೇಡಿಕೆಗಳ ಈಡೇರಿಕೆಯ ಅವಶ್ಯಕತೆಯನ್ನು ವಿವರಿಸಿ ಈಗಾಗಲೇ ಬೇಡಿಕೆ ಈಡೇರಿಕೆ ಬಹಳಷ್ಟು ವಿಳಂಬಗೊಂಡಿದ್ದು, ಇನ್ನಷ್ಟು ವಿಳಂಬಕ್ಕೆ ಆಸ್ಪದ ನೀಡದೆ ಕೂಡಲೇ ಈಡೇರಿಸುವಂತೆ ನೌಕರರು ಮತ್ತು ಅವರ ಕುಟುಂಬದವರ ಪರವಾಗಿ ವಿನಂತಿಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್ ಡಿ.ಪಾಟೀಲ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಸ್ .ಆರ್. ಪಾಟೀಲ, ಗೌರವಾಧ್ಯಕ್ಷ ಎಸ್ ಎನ್ ಕೋಳಿ, ಉಪಾಧ್ಯಕ್ಷ ಆರ್.ಕೆ ದುದಗಿ, ಜಿ.ಜಿ.ಬರಡೋಲ,ಪದಾಧಿಕಾರಿ ಎಲ್.ಎ.ಅಲೇಗಾಂವ, ಎಸ್.ಎಸ್.ಅತನೂರ, ಫಯಾಜ್ ಚೌಧರಿ, ಭಾಷಾ ಕುಮಸಗಿ, ಬಿ.ಎಮ್.ಅಂಜುಟಗಿ, ಜಿ.ಪಿ.ಟಿ.ಅಧ್ಯಕ್ಷ ಶಂಕರ ಕೋಳೆಕರ, ಸಿ.ಎಸ್.ಹಕಾರಿ, ಸಂಜೀವ ಅಂಕಲಗಿ, ರಮೇಶ ಮಂಜಣ್ಣಿ, ಬಸವರಾಜ ಗೊರನಾಳ, ಶ್ರಿಮಂತ ನೇದಲಗಿ, ಬಸವರಾಜ ಗಿಡಗಂಟಿ,ಎಪ್.ಎಮ್.ದರ್ಗಾ,ಪಿ.ಡಿ.ಓ.ಅಧ್ಯಕ್ಷ ಪಾರೆ, ರಜಪೂತ ,ಆರ್.ವ್ಹಿ ಪಾಟೀಲ,ಎಸ್ ಎಸ್ ರೂಗಿ, ಸೇರಿ ಸರ್ಕಾರದ ಎಲ್ಲ ಇಲಾಖೆಗಳ ನೌಕರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ, ಜಿ ಎಸ್ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರ ಪಾತ್ರ ಬಹಳ ಮುಖ್ಯ ವಾಗಿದೆ. ಕಾರ್ಯಾಂಗದ ನೌಕರರ ಬೇಡಿಕೆ ಪೂರೈಸುವ ಜವಾಬ್ದಾರಿ ಸರಕಾರದಾಗಿದೆ. ಈಗಾಗಲೇ ಸರಕಾರ ಭರವಸೆ ನೀಡಿದೆ ಅದರಂತೆ ನೌಕರಸ್ಥರ ಬೇಡಿಕೆ ಪೂರೈಸಬೇಕು.
ಎಸ್ ಆರ್ ಪಾಟೀಲ, ವಿಭಾಗೀಯ ಸಂಘಟನಾ ಕಾರ್ಯದರ್ಶಿ
6 ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಬೃಹತ್ ಸಂಘಟನೆ ಇದಾಗಿದೆ. ರಾಷ್ಟ್ರ, ರಾಜ್ಯದಲ್ಲಿ ಘಟಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆಯಾಗಿದೆ. ಈ ಸದ್ಯ ರಾಜ್ಯ ಸರಕಾರಿ ನೌಕರಸ್ಥರಿಗೆ ಸುಳ್ಳು ಭರವಸೆ ನೀಡುತ್ತಾ, ಕಾಲಹರಣ ಮಾಡುವುದು ಮತ್ತು ನೌಕರಸ್ಥರ ಸಹನೆ, ತಾಳ್ಮೆ ಪರೀಕ್ಷೆ ಮಾಡುವಂತಾಗಿದ್ದೆ. ಇದಕ್ಕೆಲ್ಲ ಇತೀಶ್ರೀ ಹೇಳಲು ಸರಕಾರ ನೌಕರಸ್ಥರ ಬೇಡಿಕೆ ಪೂರೈಸಲು ಮನವಿ ಮಾಡಿಕೊಳ್ಳತ್ತೆವೆ.
ಎಸ್ ಡಿ ಪಾಟೀಲ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರ ತಾಲ್ಲೂಕು ಘಟಕ ಇಂಡಿ