ಇಂಡಿ : ಪಂಚಮಸಾಲಿ ಗೌಡ ಲಿಂಗಾಯತ ಮಲೆಗೌಡ ದೀಕ್ಷಾ ಲಿಂಗಾಯತರಿಗೆ 2 ಎ ಹಾಗೂ ಎಲ್ಲಾ ಲಿಂಗಾಯತರಿಗೂ ಒಬಿಸಿ ಮೀಸಲಾತಿಗಾಗಿ ಆಗ್ರಹಿಸಿ ಇಂಡಿ ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಪಟ್ಟಣದ ಮಿನಿವಿಧಾನ ಸೌಧ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷರಾದ ವಿಎಚ್ ಬಿರಾದಾರ್ ಮಾತನಾಡಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ ಮೇ 5 ರ ಗುರು ವಾರದಂದು ರಾಜ್ಯಾದ್ಯಂತ ಒಂದು ದಿನ ತಾಲೂಕಿನ ತಹಶೀಲ್ದಾರ್ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಕೂಡಲಸಂಗಮ ಲಿಂಗಾಯತ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಮನವಿಯಂತೆ ಪಂಚ ಹಂತದ ಕೊನೆಯ ಚಳುವಳಿ ಇದಾಗಿದ್ದು, ಮೀಸಲಾತಿ ಪಡೆಯುವವರೆಗೂ ಹೋರಾಟ ಬಿಡುವುದಿಲ್ಲ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸು ಗೌಡ ಬಿರಾದರ್ ಮಾತನಾಡಿ ಸಮಾಜದಲ್ಲಿ ಸಾಕಷ್ಟು ಜನ ನಿರ್ಗತಿಕರು ಬಡವರಿದ್ದಾರೆ ಮೇಲೆತ್ತಲು ಸರ್ಕಾರ ಮುಂದಾಗಬೇಕಿದೆ ಸಮಾಜದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರುತ್ತಾರೆ ಸಮಾಜಕ್ಕೆ ಮೀಸಲಾತಿಯ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಸೋಮಶೇಖರ್ ದೇವರ, ಮಂಜುನಾಥ ಕಾಮಗೊಂಡ ಅನಿಲ್ ಗೌಡ ಬಿರಾದಾರ, ವಿಜಯ ರಾಥೋಡ್, ಉಮೇಶ್ ಬಳಬಟ್ಟಿ, ಶರಣಗೌಡ ಬಂಡಿ, ದೇವೇಂದ್ರ ಬರಡೋಲ, ಸ್ವಸ್ತಿಕ, ಗಣಪತಿ ಬಾಣಿಕೋಲ ಇನ್ನೂ ಅನೇಕರು ಉಪಸ್ಥಿತರು.