• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕುಡಿಯುವ ನೀರು, ಗ್ರಾಮದ ಸ್ವಚ್ಚತೆ ಹಾಗೂ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಆದ್ಯತೆ ನೀಡಿ – ಸಿಇಓ ರಿಷಿ ಆನಂದ

      Voiceofjanata.in

      April 10, 2025
      0
      ಕುಡಿಯುವ ನೀರು, ಗ್ರಾಮದ ಸ್ವಚ್ಚತೆ ಹಾಗೂ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಆದ್ಯತೆ ನೀಡಿ – ಸಿಇಓ ರಿಷಿ ಆನಂದ
      0
      SHARES
      73
      VIEWS
      Share on FacebookShare on TwitterShare on whatsappShare on telegramShare on Mail

      ಕುಡಿಯುವ ನೀರು, ಗ್ರಾಮದ ಸ್ವಚ್ಚತೆ ಹಾಗೂ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಆದ್ಯತೆ ನೀಡಿ – ಸಿಇಓ ರಿಷಿ ಆನಂದ

      ಇಂಡಿ : ಗ್ರಾಪಂ ವ್ಯಾಪ್ತಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ಆದ್ಯತೆ ನೀಡುವಂತೆ ಸಿಇಓ ರಿಷಿ ಆನಂದ ಸೂಚನೆ ನೀಡಿದರು.

      ಬುಧವಾರ ಇಂಡಿ ತಾಪಂ ಸಭಾ ಭವನದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಪಿಡಿಒಗಳೊಂದಿಗೆ ಗ್ರಾಮಗಳ ಸ್ವಚ್ಚತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳ ಮನೆ ಮನೆಗಳಿಗೆ ಭೇಟಿ ಮಾಡಿ ಕುಡಿಯುವ ನೀರು ಸಮಸ್ಯೆ ಕುರಿತು ವೀಕ್ಷಣೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಪೂರೈಕೆ ಪೂರ್ವದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ತದನಂತರ ಕುಡಿಯುವ ನೀರನ್ನು ಪೂರೈಸಬೇಕು, ಸಮಸ್ಯೆಗಳಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ವರದಿ ಮಾಡತಕ್ಕದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಂದ ತಕ್ಷಣ ಪರಿಹಾರ ಒದಗಿಸಲಾಗುವುದು. ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳುಂಟಾಗದಂತೆ ಕ್ರಮವಹಿಸಬೇಕು. ಸಮಸ್ಯೆಗಳು ಉದ್ಭವಿಸುವ ಪೂರ್ವದಲ್ಲಿಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

      ಪ
      ಜಿಲ್ಲೆಯಲ್ಲಿ ಶೇ.೯೦ ರಷ್ಟು ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ವ್ಯವಸ್ಥೆ ಇದೆ ಇನ್ನು ಶೇ.೧೦ ರಷ್ಟು ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಪಂಚಾಯಿತಿ ವ್ಯಾಪ್ತಿಗಳಲ್ಲಿ ಶಾಲೆಗಳು, ಅಂಗನವಾಡಿಗಳು, ಗ್ರಂಥಾಲಯಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಹತ್ವದ್ದಾಗಿದೆ. ಹಾಗಾಗಿ ಎಲ್ಲ ಪಿಡಿಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರು ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

      ಅಂಗನವಾಡಿ ಕೇಂದ್ರಗಳ ಸುತ್ತ – ಮುತ್ತಲಿನ ಪರಿಸರ ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ, ಪೋಲಿಯೋ ವೈರಸ್ ರೋಗದ ಉದಾಹರಣೆ ನೀಡುತ್ತಾ ರೋಗ – ರುಜಿನುಗಳು ಬರದ ಹಾಗೆ ಅಂಗನವಾಡಿಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಂಡಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಪ್ರಸ್ತುತ ಆರಂಭಿಸಲಾಗಿರುವ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ”ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಪ್ರತಿವಾರ ಪ್ರತಿ ಗ್ರಾಪಂ ವ್ಯಾಪ್ತಿಯ ಮೂರು ಅಂಗನವಾಡಿಗಳ ಒಳಾಂಗಣ ಮತ್ತು ಹೊರಾಂಗಣ ಆವರಣಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಈ ಅಭಿಯಾನದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಪ್ರತಿ ನಿತ್ಯ ತಾಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನದ ಕುರಿತು ಪರಿಶೀಲನೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

      ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಅಂಗನವಾಡಿ ಮತ್ತು ಗ್ರಂಥಾಲಯಗಳಿಗೆ ಅವಶ್ಯಕತೆಯಿರುವ ಕಲಿಕಾ ಸಾಮಗ್ರಿಗಳು, ವಿನೂತನ ಆಟಿಕೆ ಸಾಮಾನುಗಳು, ಉತ್ತಮ ಪುಸ್ತಕಗಳು, ಮೇಜುಗಳನ್ನು ಕಡ್ಡಾಯವಾಗಿ ಪೊರೈಕೆ ಮಾಡಿ ಮಾದರಿ ಅಂಗನವಾಡಿಗಳನ್ನಾಗಿ ಮಾರ್ಪಡಿಸಲು ಸೂಚಿಸಿದರು.

      ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆದ್ಯತೆ ಕಾಮಗಾರಿಗಳಾದ ಮಳೆನೀರು ಕೊಯ್ಲು ಘಟಕ, ಬೋರ್ ವೆಲ್ ಮರುಪೂರಣ ಘಟಕ, ಶಾಲಾ ಶೌಚಾಲಯ, ಬಿಸಿಯೂಟದ ಅಡುಗೆ ಕೋಣೆ, ಶಾಲಾ ಕಾಂಪೌಂಡ್, ಶಾಲಾ ಆಟದ ಮೈದಾನ, ಸ್ಮಶಾನ ಅಭಿವೃದ್ಧಿ ಮತ್ತು ಎನ್.ಆರ್.ಎಲ್.ಎಮ್ ಸಂಜೀವಿನಿ ಶೆಡ್ ಕಾಮಗಾರಿಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಹಾಗೂ ಶಾಲೆಗಳ ಶೌಚಾಲಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ನಿರಂತರವಾಗಿ ಸ್ವಚ್ಚತೆ ಕಾಪಾಡಲು ಕ್ರಮವಹಿಸಬೇಕು ಎಂದರು.

      ಪ್ರತಿ ಗ್ರಾಮದಲ್ಲೊಂದು ಆಟದ ಮೈದಾನ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಪಿಡಿಒಗಳು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಹಾಗೂ ಅತೀ ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು. ಗ್ರಾಪಂ ತೆರಿಗೆ ಸಂಗ್ರಹಣೆ ಪ್ರಗತಿಯನ್ನೂ ಸಹ ಆದ್ಯತೆಯ ಮೇರೆಗೆ ಸಾಧಿಸಬೇಕು ಎಂದು ಸೂಚಿಸಿದರು.

      ಇಒ ನಂದೀಪ ರಾಠೋಡ, ಸಂಜಯ ಖಡಗೇಕರ, ಮಹಾಂತೇಶ ಹೋಗೋಡಿ, ಪ್ರಕಾಶ ರಾಠೋಡ ಮತ್ತಿತರಿದ್ದರು.

      ಇಂಡಿ ತಾಪಂ ಸಭಾಭವನದಲ್ಲಿ ಸಿಇಒ ರಿಷಿ ಆನಂದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

      Tags: #indi / vijayapur#Prioritize Drinking Water#Public News#State News#Today News#Voice Of Janata#Voiceofjanata.in#ಕುಡಿಯುವ ನೀರುVillage Cleanliness and Development of Anganwadi Center - CEO Rishi Anandaಗ್ರಾಮದ ಸ್ವಚ್ಚತೆ ಹಾಗೂ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಆದ್ಯತೆ ನೀಡಿ - ಸಿಇಓ ರಿಷಿ ಆನಂದ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      0
      ಬಿಜೆಪಿ ಪ್ರಯಾಸದ ಗೆಲುವು

      August 27, 2026
      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      August 21, 2026
      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      August 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.