ಲಿಂಗಸೂಗೂರು: ಪ್ರವಾಹ ಸಂದರ್ಭದಲ್ಲಿ ಕಾರ್ಯಾಚರಣೆ ಹಾಗೂ ರಕ್ಷಣೆ ಮಾಡುವ ನಿಟ್ಟಿನಲ್ಲಿ ಲಿಂಗಸುಗೂರು ಪಟ್ಟಣದ ಕರಡಕಲ್ ದೊಡ್ಡ ಕೆರೆಯಲ್ಲಿ ತಹಸಿಲ್ದಾರ್ ಹಾಗೂ ಅಗ್ನಿಶಾಮಕದಳ ಅಧಿಕಾರಿಗಳ ನೇತೃತ್ವದಲ್ಲಿ ಕೆರೆಯಲ್ಲಿ ಬೋಟ್ ಚಲಾಯಿಸುವದರ ಮೂಲಕ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಯಿತು.
ಲಿಂಗಸುಗೂರು ಮತ್ತು ದೇವದುರ್ಗ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತವೆ. ಅಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಜಿಲ್ಲಾ ಆಡಳಿತ ಲಿಂಗಸಗೂರು 1 , ದೇವದುರ್ಗ. 1, ಒಟ್ಟು ಎರಡು ಬೋಟ್ ಗಳನ್ನು ನೀಡಿದೆ. ಪ್ರಾಯೋಗಿಕವಾಗಿ ಲಿಂಗಸುಗೂರಿನ ಕರಡಕಲ್ನ ದೊಡ್ಡಕೆರೆಯಲ್ಲಿ ಬೋಟ್ಗಳನ್ನು
ಆಪರೇಟ್ ಮಾಡುವ ಮೂಲಕ ಪರೀಕ್ಷಿಸಲಾಯಿತು.