ಆ.3ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ..
ಇಂಡಿ : ಇಂಡಿಯಿಂದ ಝಳಕಿ ಮಾರ್ಗದಲ್ಲಿನ ಶಾಲಾ ಕಾಲೇಜುಗಳ ಆವರಣದಲ್ಲಿರುವ ಸ್ಥಾವರನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಳ್ಳುವುದರಿಂದ 110/11 ಕೆವ್ಹಿ ವಿದ್ಯುತ್ ವಿತರಣಾ ಉಪ ಕೇಂದ್ರಗಳಾದ ಝಳಕಿ, ಚಡಚಣ, ಇಂಚಗೇರಿ, ಕೆರೂರ, ಜಿಗಜಿವಣಗಿ ಹಾಗೂ 33/11 ಕೆವ್ಹಿ ವಿದ್ಯುತ್ ವಿತರಣಾ ಉಪ ಕೇಂದ್ರಗಳಾದ ಹೊರ್ತಿ, ಹಲಸಂಗಿ ಮತ್ತು ನೀವರಗಿ ಮೇಲೆ ಬರುವ ಎಲ್ಲ 11 ಕೆವ್ಹಿ ಹಾಗೂ ಹೆಚ್.ಟಿ. ವಿದ್ಯುತ್ ಮಾರ್ಗಗಳಿಗೆ ಆ.3ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.