ವಿಜಯಪುರ : ಮನೆಯ ಎದುರು ನಿಲ್ಲಿಸಿದ ವಾಹನದಲ್ಲಿರುವ ಪೆಟ್ರೋಲ್ ಕಳ್ಳತನಗೈದಿರುವ ಘಟನೆ ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಅನಿಲ ಗೊಳ್ಳಗಿ ಎಂಬುವರ ಬೈಕ್, ಕಾರಿನಲ್ಲಿದ್ದ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ.
ಅಲ್ಲದೇ, ಕಳ್ಳತನದ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕಳ್ಳ ರಾಜಾರೋಷವಾಗಿ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.