ಅಟಲ್ ಜಿ ಕೇಂದ್ರದ ಆಪರೇಟರ 8 ತಿಂಗಳಿಂದ ವೇತನವಿಲ್ಲ..!
ಬಾಕಿ ವೇತನಕ್ಕೆ ಆಗ್ರಹಿಸಿ ಮನವಿ : ಅಟಲ್ ಜಿ ಸ್ನೇಹಿ ಕೇಂದ್ರ
ಇಂಡಿ : ಕಳೆದ 8 ತಿಂಗಳಿಂದ ವೇತನವಿಲ್ಲದೆ, ಕುಟುಂಬ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಕೂಡಲೇ ಬಾಕಿ ಇರುವ ವೇತನವನ್ನು ಆ ಸಂಸ್ಥೆಗಳಿಂದ ನೀಡುವಂತೆ ಒತ್ತಾಯಿಸಿ ಅಟಲ್ ಜಿ ಸ್ನೇಹಿ ಕೇಂದ್ರ ಆಪರೇಟರಗಳು ತಹಶೀಲ್ದಾರ ಬಿ ಎಸ್ ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ತಹಶಿಲ್ದಾರ ಕಾರ್ಯಾಲಯದಲ್ಲಿ ಗುರುವಾರ ಮನವಿಸ ಸಲ್ಲಿಸಿ ತದನಂತರ ಮಾತನಾಡಿದ ಆಫರೆಟರ್ ಸಾಯಬಣ್ಣ ಹಳ್ಳಿ ಅಟಲ್ ಜೀ ಸ್ನೇಹಿ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಎಲ್ಲಾ ಸೇವೆಗಳು ಕಂಕಣ ಬದ್ದತೆಯಿಂದ ಹಾಗೂ ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೆವೆ. ಆದರೆ ಅಟಲ್ ಜಿ ಸ್ನೇಹಿ ನಿರ್ದೇಶನಾಲಯದಿಂದ 2022 ರಲ್ಲಿ ಬಾಗಲಕೋಟೆಯ ಎಸ್ ಬಿ ಎಲ್ ಸಂಸ್ಥೆಗೆ ಅಟಲ್ ಜೀ ಕೇಂದ್ರದ ನಿರ್ವಹಣೆ ಟೆಂಡರ್ ನೀಡಿತ್ತು. ಆ ಸಂಸ್ಥೆ ಆಪರೇಟರ್ ಗಳಿಗೆ ಕೊಡಬೇಕಾದ ವೇತನ ಹಾಗೂ ಇಎಸ್ಐ/ಪಿಎಪ್ ಬಾಕಿ ಉಳಿಸಿಕೊಂಡಿದ್ದು, ಇಲ್ಲಿಯವರೆಗೆ ನೀಡಿಲ್ಲ. ಈ ಬಗ್ಗೆ ಎರಡು ಬಾರಿ ಮನವಿ ಸಲ್ಲಿಸಿದ್ದೆವೆ. ಅದಲ್ಲದೇ 2024 ಎಪ್ರಿಲ್ ದಿಂದ 4 ತಿಂಗಳು ವೇತನ ವಿಜಯಪುರ ಶಾಯಿನಾಥ್ ಸೆಕ್ಯೂರಿಟಿ ಪೊರ್ಸ ಬಾಕಿ ಉಳಿಸಿಕೊಂಡಿದೆ. ಹಾಗೆ ಕಳೆದ 1 ವರ್ಷದಿಂದ ಅಟಲ್ ಜಿ ಸ್ನೇಹಿ ಕೇಂದ್ರಕ್ಕೆ ಒದಗಿಸಬೇಕಾದ ಯಾವುದೇ ಸ್ಟೇಷನರಿ ವಸ್ತುಗಳು ಪೂರೈಕೆ ಸಹ ಮಾಡಿರುವುದಿಲ್ಲ. ಈ ಎಲ್ಲಾ ಕಾರಣಗಳು ದೊಡ್ಡ ಸಮಸ್ಯೆಗಳಾಗಿವೆ. ಈ ಸದ್ಯ ಒಂದು ವಾರದಲ್ಲಿ ವೇತನ ನೀಡಬೇಕು ಇಲ್ಲವಾದರೆ ಎಲ್ಲಾ ಅಟಲ್ ಜಿ ಸ್ನೇಹಿ ಕೇಂದ್ರ ಸ್ಥಗಿತಗೊಳಿಸಿ ತಹಶಿಲ್ದಾರ ಕಾರ್ಯಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತೆವೆ ಎಂದು ಹೇಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಹುಲ ದಳವಾಯಿ, ಸಂಗಣ್ಣ ಶಿವಪೂರ, ಅರುಣ ಕಟಕದೊಂಡ, ಮಹೇಶ ಬೈರಶೇಟ್ಟಿ, ಅರವಿಂದ ಪಾಟೀಲ ಉಪಸ್ಥಿತರಿದ್ದರು.