ರಾಮಣ್ಣ ಯಲ್ಲಪ್ಪ ಹಡಲಗೇರಿ ನಿಧನ..
ವಿಜಯಪುರ, ಆ. 01: ಸಾರಿಗೆ ಇಲಾಖೆ ನಿವೃತ್ತ ಚಾಲಕ ರಾಮಣ್ಣ ಯಲ್ಲಪ್ಪ ಹಡಲಗೇರಿ(70) ನಿಧನರಾಗಿದ್ದಾರೆ.
ನಗರದ ಉದಯ ನಗರ ನಿವಾಸಿಯಾಗಿದ್ದ ಅವರು, ಪತ್ನಿ, ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಶ್ರೀಕಾಂತ ಹಡಲಗೇರಿ ಸೇರಿದಂತೆ ನಾಲ್ಕು ಜನ ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.
ಸಂಜೆ ಇಂಡಿ ಬೈಪಾಸ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು. ಜ್ಞಾನಯೋಗಾಶ್ರಮದ ಶ್ರೀ ಬಸಲಿಂಗ ಸ್ವಾಮೀಜಿ, ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಅಶ್ಪಾಕ ಮನಗೂಳಿ ಸೇರಿದಂತೆ ನಾನಾ ಮುಖಂಡರು ಅಂತಿಮ ದರ್ಶನ ಪಡೆದರು.