ವಿಜಯಪುರ : ನಿಂಬೆ ನಾಡಿನ ಬಬಲಾದ ಗ್ರಾಮದ ಕಮಲಾ ಪ್ರೀತು ದಶವಂತ ಅವರನ್ನು ಪರಿಶಿಷ್ಠ ಜಾತಿ ಅಲೆಮಾರಿ ಚೆನ್ನದಾಸರ್ /ಮಾಲದಾಸರ್/ಹೊಲಯದಾಸರ್ ಜನಸೇವಾ ಸಮಿತಿ ಮಹಿಳಾ ಘಟಕದ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಬಸವರಾಜ ನಾರಾಯಣಕರ್ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಂಘಟನಾ ತ್ರೈಮಾಸಿಕ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ರಾಜ್ಯಾಧ್ಯಕ್ಷ ಬಸವರಾಜ ನಾರಾಯಣಕರ್ ಮತ್ತು ವಿಜಯಪುರ ಜಿಲ್ಲಾ ಅಧ್ಶಕ್ಷ ಸಂಜೀವಕುಮಾರ ದಶವಂತ ಆದೇಶ ಮಾಡಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಸವರಾಜ ಮಾತಾನಾಡಿ ಅವರು, ಕಮಲಾ ಪ್ರೀತು ದಶವಂತ ಸಾಮಾಜಿಕ ಕಳಕಳಿಯ ಕಾಳಜಿ ಹೊಂದಿದ್ದಾರೆ. ಅದನ್ನು ಇನ್ನಷ್ಟು ಜವಾಬ್ದಾರಿಯುತವಾಗಿ, ಪ್ರಾಮಾಣಿಕವಾಗಿ ಮತ್ತು ನ್ಯಾಯಯುತವಾಗಿ ಸರಕಾರದ ಹಾಗೂ ಸಾರ್ವಜನಿಕವಾಗಿ ನಿರ್ಲಕ್ಷ್ಯ ದೌರ್ಜನ್ಯಗೆ ಒಳಪಟ್ಟವರಿಗೆ ಶಕ್ತಿ ದ್ವನಿಯಾಗಿ ನಿಂತುಕೊಂಡು ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.