ಎಲ್ಲ ತಾಲೂಕುಗಳಲ್ಲಿ ಸ್ವಂತ ಕಟ್ಟಡ ಗುರಿ
ಇಂಡಿ : ವಿದ್ಯುತ ಗುತ್ತಿಗೆದಾರರ ಸಂಘವು ಕಳೆದ ೧೦೩ ವರ್ಷಗಳಿಂದ ರಾಜ್ಯದ ೧೭೫ ತಾಲೂಕುಗಳಲ್ಲಿ ಸಮಿತಿಗಳಿವೆ. ಹಂತ ಹಂತ ವಾಗಿ ೫ ವರ್ಷಗಳಲ್ಲಿ ಸ್ವಂತ ಕಟ್ಟಡ ಹೊಂದಲು ಪ್ರಯತ್ನ ನಡೆದಿದೆ ಎಂದು ವಿದ್ಯುತ ಗುತ್ತಿಗೆದಾರರ ಸಂಘದ ರಾಜ್ಯಾದ್ಯಕ್ಷ ಸಿ. ರಮೇಶ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಶುಭಂ ಮಂಗಲಕಾರ್ಯಾಲಯ ಹತ್ತಿರದ ತಾಲೂಕು ಸಮಿತಿ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಕಟ್ಟಡಗಳು ನಿರ್ಮಿಸುವ ಕಾರ್ಯ ಪ್ರಾರಂಭವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂಡಿಯಲ್ಲಿ ಸಂಘದ ಕಟ್ಟಡ ಕಾರ್ಯ ಪ್ರಾರಂಭವಾಗಿದೆ ಎಂದರು.
ಕೇಂದ್ರ ಸಮಿತಿಯಿಂದ ಸಹಾಯಧನ ನೀಡಲಾಗುವದು ಎಂದರು. ಅದರ ಪ್ರಕಾರ ಹತ್ತು ಲಕ್ಷ ರೂ ಚೆಕ್ಕನ್ನು ನೀಡಿದರು.
ಜಿಲ್ಲಾಧ್ಯಕ್ಷ ಲಕ್ಷಿö್ಮÃಕಾಂತ ಕುಲಕಣ ð, ತಾಲೂಕಾ ಅಧ್ಯಕ್ಷ ಶೈಲೇಶ ಬೀಳಗಿ,ಸೈಯದ ಯುನಿಸ, ವಾಹಿದ ಮಕಾನದಾರ ಚಿದಾನಂದ ಕಾಂಬಳೆ ಮತ್ತಿತರಿದ್ದರು.
ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಶುಭಂ ಮಂಗಲಕಾರ್ಯಾಲಯ ಹತ್ತಿರದ ತಾಲೂಕು ಸಮಿತಿ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ರಮೇಶ ಮಾತನಾಡಿದರು.




















