ಈ ಹಿಂದೆ ಲೋಕಸಭಾ ಚುನಾವಣೆಗೆ ಸುನೀತಾ ಚವ್ಹಾಣ, ಪ್ರಕಾಶ ರಾಠೋಡ, ಬಲ ಸಮಾಜದ ಕೆ. ಶಿವರಾಮ ಸ್ಪರ್ಧಿಸಿದರೂ ಅವರನ್ನು ಬಿಟ್ಟು ರಮೇಶ್ ಜಿಗಜಿಣಿಗಿ ಅವರಿಗೆ ಮತ ನೀಡುವ ಮೂಲಕ ಗೆಲುವಿನಲ್ಲಿ ಶ್ರಮಿಸಿದ್ದೆವೆ ಎಂದು ಹೇಳಿದರು.
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಅಡಿಯಲ್ಲಿ ಇರುವಂತಹ ಮೀಸಲು ಕ್ಷೇತ್ರ ಹೊರತುಪಡಿಸಿ ಸಾಮನ್ಯ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ, ಆಗ ನಾವು ಒಪ್ಪಿಕೊಳ್ಳುತ್ತೆವೆ. ಆದರೆ ಈ ಕೂಡಲೇ ವಾರದಲ್ಲಿ ಹೇಳಿದ ಮಾತು ವಾಪಸ್ ಪಡೆದು, ಬಲ ಸಮಾಜಕ್ಕೆ ಕ್ಷೇಮೆಯಾಸಿಬೇಕು ಇಲ್ಲವಾದರೆ ತಾಲ್ಲೂಕು, ಜಿಲ್ಲಾಧಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರೆಪ್ಪ ಮಂದೆವಾಲಿ, ರಾಮಚಂದ್ರ ದೊಡಮನಿ, ಪರಮೇಶ ಇಂಗಳೇಶ್ವರ, ಲಕ್ಷ್ಮಣ ದೊಡ್ಡ ಮನಿ, ಗಡ್ಡೆಪ್ಪ ಹರಿಜನ, ಚಿಕ್ಕಯ್ಯ ಕಟ್ಟಿಮನಿ, ಕೇದಾರ ಹರಿಜನ, ರಾಜು ಸಾಲೋಟಗಿ ಸೇರಿದಂತೆ ಉಪಸ್ಥಿತರಿದ್ದರು.