ಭೀಮಾ ನದಿಗೆ ಒಂದು ಲಕ್ಷ ೨೫ ಸಾವಿರ ಕ್ಯೂಸೆಕ್ಸ ನೀರು.
ಇಂಡಿ : ಮಹಾರಾಷ್ಟçದ ಭೀಮಾ ನದಿ ಪಾತ್ರದಲ್ಲಿ ಮಳೆಯ ಹಿನ್ನೆಲೆಯಲ್ಲಿ ಮಹಾರಾಷ್ಟç ಉಜನಿ ಜಲಾಶಯದಿಂದ ಭೀಮಾ ನದಿಗೆ ೬೦ ಸಾವಿರ ಕ್ಯೂಸೆಕ್ಸ ಮತ್ತು ವೀರ ಭಟಕರ ಜಲಾಶಯದಿಂದ ಭೀಮಾ ನದಿಗೆ ೬೫ ಸಾವಿರ ನೀರು ರವಿವಾರ ೮ ಗಂಟೆಗೆ ಹರಿಯ ಬಿಡಲಾಗಿದ್ದು ಅದು ಕರ್ನಾಟಕದ ಚಡಚಣ ತಾಲೂಕಿನ ದಸೂರ ಗ್ರಾಮಕ್ಕೆ ಸೋಮವಾರ ಸಂಜೆ ಬರುವ ನಿರೀಕ್ಷೆ ಇದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ತಿಳಿಸಿದ್ದಾರೆ.
ಅದಲ್ಲದೆ ಭೀಮಾ ನದಿ ಪಾತ್ರದ ಉಜನಿ ಮತ್ತು ವೀರ ಭಟಕರ ಜಲಾಶಯದಲ್ಲಿ ನೀರು ಪೂರ್ತಿ ಇದ್ದು ಮತ್ತು ಎರಡು ಜಲಾಶಯಕ್ಕೆ ಹರಿದು ಬರುವ ನೀರನ್ನು ಭೀಮಾ ನದಿ ಪಾತ್ರಕ್ಕೆ ನೇರವಾಗಿ ಬಿಡುವದು. ಅದಲ್ಲದೆ ಸೋಮವಾರ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾದ್ಯತೆ ಇದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಎಸಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.