ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ : ವಿ. ಪ ಶಾಸಕ ಸುನೀಲಗೌಡ
ವಿಜಯಪುರ: ನೀರಾವರಿ ಯೋಜನೆಗಳಿಂದ ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಶನಿವಾರ ಮುಸ್ಸಂಜೆ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಚಿವ ಎಂ. ಬಿ. ಪಾಟೀಲ ಅವರು ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡುವ ಮೂಲಕ ಹಿಂದೆ ಯಾರೂ ಮಾಡದ ಮತ್ತು ಮುಂದೆ ಯಾರೂ ಮಾಡದಂಥ ಯೋಜನೆಗಳನ್ನು ಮಾಡಿದ್ದಾರೆ. ಆದಿಲ್ ಶಾಹಿ ಕಾಲದ ಬೇಗಂ ತಾಲಾಬ, ಮಮದಾಪುರ, ಭೂತನಾಳ ಕೆರೆಗಳು ಸೇರಿದಂತೆ ನೂರಾರು ಕೆರೆಗಳಿಗೆ ನೀರು ಹರಿಸಿದ್ದಾರೆ. ಮಳೆಗಾಗಿ ದೇವರನ್ನು ಆಶ್ರಯಿಸುತ್ತಿರುವ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಪ್ರಾರಂಭಿಸಿ ಒಂದು ಕೋಟಿ ಗಿಡ ನೆಟ್ಟು ಅರಣ್ಯ ಕ್ರಾಂತಿ ಮಾಡಿದ್ದಾರೆ. ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿ, ಜಲಕ್ರಾಂತಿ, ಅರಣ್ಯ ಕ್ರಾಂತಿಯ ಬಳಿಕ ಈಗ ಶಿಕ್ಷಣ ಕ್ರಾಂತಿ ಮಾಡುತ್ತಿದ್ದಾರೆ. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸರಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ಕೈಗಾರಿಕೆ ಸಚಿವರಾಗಿ ಯುವಕರಿಗೆ ಉದ್ಯೋಗ ಒದಗಿಸಲು ಕೈಗಾರಿಕೆ ಕ್ರಾಂತಿಯನ್ನೂ ಮಾಡುತ್ತಿದ್ದಾರೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ನಡೆಯುವ ಮೂಲಕ ಕಾಯಕ ನಿರತರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರಾಂಪೂರ ಶ್ರೀ ಘಟಿವಾಳೇಶ್ವರ ಚಂದ್ರಗಿರಿಮಠದ ಶ್ರೀ ವಿದ್ಯಾನಂದಯ್ಯ ಹಿರೇಮಠ ಸ್ವಾಮೀಜಿ, ನಿಜಗುಣಾನಂದಯ್ಯ ಹಿರೇಮಠ ಸ್ವಾಮೀಜಿ, ಎಪಿಎಂಸಿ ಕಾರ್ಯದರ್ಶಿ ಅಲ್ಲಾಬಕ್ಷ ಬಿಜಾಪುರ, ಎಇಇ ಎಲ್. ಬಿ. ಲಮಾಣಿ, ಪ. ಪಂ. ಅಧಿಕಾರಿ ರಾಘವೇಂದ್ರ ನಡುವಿನಮನಿ, ಮುಖಂಡರಾದ, ಸಾಹೇಬಗೌಡ ಕೆಂಪವಾಡ, ಐ. ಬಿ. ಉಳ್ಳಾಗಡ್ಡಿ,ರಾಜು ಬಿಳೂರ, ಮಲ್ಲಪ್ಪ ಹೊನವಾಡ, ಜಗದೀಶಗೌಡ ಪಾಟೀಲ, ಬಸಯ್ಯ ವಿಭೂತಿಮಠ, ಲೇಪು ಕೊಣ್ಣೂರ, ಭೀಮು ನಾಟೀಕಾರ, ಆರ್ ಬಿ ದೇಸಾಯಿ, ಹಾಜಿಬಾಯಿ ಕೋಟ್ಟಲಗಿ, ಯಮನಪ್ಪ ಮಲಕನವರ, ಸಿದ್ದಾರ್ಥ ಪರನಾಕರ, ಬುಳ್ಲಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ನಂತರ ಸುನೀಲಗೌಡ ಪಾಟೀಲ ಅವರು ತಿಕೋಟಾದಲ್ಲಿ ಪಟ್ಟಣ ಪಂಚಾಯಿತಿ ವತಿಯಂದ 2023-24ನೇ ವರ್ಷದ ನಗರೋತ್ಥಾನ ಹಂತ 4ರ ಅನುದಾನದಲ್ಲಿ ರೂ. 18 ಲಕ್ಷ ವೆಚ್ಚದಲ್ಲಿ ಬಾಬು ಜಗಜೀವನರಾಮ ಸರ್ಕಲ್ ಹತ್ತಿರ, ಮಹಾದೇವ ಕುರಿ ಅವರ ಮನೆಯ ಹತ್ತಿರ, ದುರ್ಗಾದೇವಿ ಹತ್ತಿರ, ರುದ್ರಭೂಮಿಯಲ್ಲಿ ಹಾಗೂ ಬುದ್ಧ ಸರ್ಕಲ್ ಹತ್ತಿರ ಅಳವಡಿಸಲಾಗಿರುವ ಹೈಮಾಸ್ಕ್ ಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶಗೌಡ ಪಾಟೀಲ, ಬಸಯ್ಯಾ ವಿಭೂತಿಮಠ, ಲೇಪು ಕೊಣ್ಣೂರ, ಭೀಮು ನಾಟೀಕಾರ, ಆರ್. ಬಿ. ದೇಸಾಯಿ, ಹಾಜಿಬಾಯಿ ಕೋಟ್ಟಲಗಿ, ಯಮನಪ್ಪ ಮಲಕನವರ, ಸಿದ್ದಾರ್ಥ ಪರನಾಕರ, ಬುಳಪ್ಪ ಪೂಜಾರಿ, ಪ ಪಂಚಾಯಿತಿಯಿಂದ ಅಧಿಕಾರಿ ರಾಘವೇಂದ್ರ ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.
1 MLC SBP Rampur Foundation Puje
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಾನಾ ಮುಖಂಡರು ಉಪಸ್ಖಿತರಿದ್ದರು.
2 MLC SBP Rampur Foundation Puje
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಾನಾ ಮುಖಂಡರು ಉಪಸ್ಖಿತರಿದ್ದರು.