ತೊಗರಿ ಬೆಳೆ ಪರಿಹಾರ ಆಗ್ರಹಿಸಿ ಅಹೋರಾತ್ರಿ ಧರಣಿ
ಕಂಪನಿಯಿಂದ ಒಂದೇ ಒಂದು ಪೈಸೆ ಬಂದಿಲ್ಲ : ಪ್ರಗತಿಪರ ರೈತ ಮಲ್ಲಪ್ಪ ಗುಡ್ಲ
ಇಂಡಿ : ತಾಲೂಕಿನ ರೈತರು ಓರಿಯಂಟಲ್ ಇನ್ಸುರೆನ್ಸ ಕಂಪನಿಗೆ ಪ್ರತಿ ಹೇಕ್ಟರ ಪ್ರದೇಶಕ್ಕೆ ರೂ ೯೬೦ ರಂತೆ ೧೧೭೦೦ ರೈತರು ಒಂದು ಕೋಟಿ ೪೫ ಲಕ್ಷ ರೂ ಸಂದಾಯ ಮಾಡಿದ್ದಾರೆ. ಆದರೆ ರೈತರಿಗೆ ತೊಗರಿ ಬೆಳೆ ಕುರಿತು ಇನ್ಸುರೆನ್ಸ ಕಂಪನಿಯಿಂದ ಒಂದು ಪೈಸೆ ಕೂಡ ಬಂದಿಲ್ಲ ಎಂದು ಪ್ರಗತಿಪರ ರೈತ ಮಲ್ಲಪ್ಪ ಗುಡ್ಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇಯಿಂದ ತೊಗರಿ ಬೆಳೆಗೆ ಪರಿಹಾರ ಆಗ್ರಹಿಸಿ ನಡೆದ ಅಹೋರಾತ್ರಿ ಸತ್ಯಾಗ್ರಹದ ಎರಡನೆಯ ದಿನದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನ ಎಲ್ಲ ರೈತರಿಗೆ ಸತತವಾಗಿ ಮೂರು ವರ್ಷದಿಂದ ಖಾಸಗಿ ವಿಮಾ ಕಂಪನಿ ಬೆಳೆ ಪರಿಹಾರ ನೀಡದೇ ಇರುವದಕ್ಕೆ ಅಕ್ರೋಶಗೊಂಡ ರೈತರು ಕಂಪನಿ ಮತ್ತು ಸರಕಾರದ ವಿರುದ್ಧ ಘೋಷಣೆ ಕೋಗಿದರು.
ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಖಾಸಗಿ ಕಂಪನಿ ರೈತರಿಗೆ ಮೋಸ ಮಾಡುತ್ತಿವೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಈ ಕುರಿತು ವಿಚಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಏ. ೯ ರಂದು ತಾಂಬಾ ದಲ್ಲಿ ರಾಜ್ಯ ಹೆದ್ದಾರೆ ತಡೆ, ೧೦ ರಂದು ನಾದ ಕೆಡಿ ಗ್ರಾಮದಲ್ಲಿ ರಸ್ತೆ ತಡೆ ಮತ್ತು ೧೧ ರಂದು ಝಳಕಿಯಲ್ಲಿ ರಾಷ್ಟಿçÃಯ ಹೆದ್ದಾರೆ ತಡೆ ಕರವೇ ಕಾರ್ಯಕರ್ತರು ಮತ್ತು ಪ್ರಗತಿಪರ ರೈತರಿಂದ ನಡೆಯಲಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಅಹಿರಸಂಗದ ಪರಮಪೂಜ್ಯ ರೇವಣಸಿದ್ದಯ್ಯ ಶ್ರೀಗಳು ತಾಲೂಕಿನ ಸಮಸ್ಥ ಮಠಾಧೀಶರ ಪರವಾಗಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಹಣಮಂತರಾಯಗೌಡ ಪಾಟೀಲ, ಬತ್ತು ಸಾವಕಾರ ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣ ಮಾತನಾಡಿದರು.
ಪ್ರತಿಭಟನೆಯಲ್ಲಿ ಧರ್ಮರಾಜ ಸಾಲೋಟಗಿ, ಮಂಜು ದೇವರ, ಶ್ರೀಕಾಂತ ಬಡಿಗೇರ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ರಾಮಸಿಂಗ ಕನ್ನೊಳ್ಳಿ, ರವಿ ಕ್ಷತ್ರಿ, ಅಶೋಕ ಅಕಲಾದಿ, ಈರಣ್ಣ ಕಪ್ಪೆನವರ, ಅರವಿಂದ ಪಾಟೀಲ, ಶಿವಾನಂದ ಗಚ್ಚಿನಮಠ, ಸಂತೋಷ ಬಗದುರಗಿ, ಮಲ್ಲು ಚಾಕುಂಡಿ, ಶ್ರೀಶೈಲ ಗುನ್ನಾಪುರ, ಶಿವಾನಂದ ಚಾಳಿಕಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆ ಪರಿಹಾರ ಆಗ್ರಹಿಸಿ ನಡೆದ ಅಹೋರಾತ್ರಿ ಹೋರಾಟದಲ್ಲಿ ಮಲ್ಲಪ್ಪ ಗುಡ್ಲ ಮಾತನಾಡಿದರು.




















