ಕೀರೆಪಾತಿ ಗ್ರಾಮದಲ್ಲಿ ನೂತನ ಚರ್ಚ್ ಉದ್ಘಾಟನೆ
ಹನೂರು: ತಾಲ್ಲೂಕಿನ ಕೀರೆಪಾತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂತ ಮರಿಯ ಮಗ್ದಲೇನಮ್ಮನವರ ದೇವಾಲಯವನ್ನು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಬಿಷಪ್ ಬರ್ನಾರ್ಡ್ ಮೋರಸ್ ರವರಿಂದ ಉದ್ಘಾಟಿಸಲಾಯಿತು.ಉದ್ಘಾಟನೆಯ ಅಂಗವಾಗಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಯನ ದಿವ್ಯ ಬಲಿಪೂಜೆಯನ್ನು ನೆರವೇರಿಸಲಾಯಿತು.
ರಾತ್ರಿ ಶೃಂಗರಿಸಲ್ಪಟ್ಟ ದೇವಮಾತೆಯ ವೈಭವದ ತೇರಿನ ಮೇಣದ ಬತ್ತಿ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು. ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳನ್ನು ಹಾಡಿದರು.ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕ್ರೈಸ್ತರು ಮೇಣದಬತ್ತಿಯನ್ನು ಹಿಡಿದುಕೊಂಡು ಸಾಗಿದರು.ಧರ್ಮಕೇಂದ್ರದ ಗುರುಗಳಾದ ಫಾಧರ್ ಟೆನ್ನಿ ಕುರಿಯನ್ ಹಾಗೂ ಇನ್ನಿತರ ಗುರುಗಳು ಉಪಸ್ಥಿತರಿದ್ದರು.
ವರದಿ : ಚೇತನ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ