ರಾಯಚೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಸರ್ಕಾರಿ ಪ್ರೌಢಶಾಲೆ ಚಂದ್ರಬಂಡಾದ ಚಾರ್ಲಿ ಡಾರ್ವಿನ್ ಇಕೋಕ್ಲಬ್ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರು ಪಿಎಚ್ ಮರಾಠಿ ಅವರು ಸಿವಿ ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಸಿವಿ ರಾಮನ್ ಅವರು ಒಬ್ಬ ಮಹಾನ್ ವ್ಯಕ್ತಿಗಳು ಬೆಳಕಿನ ಕಿರಣವನ್ನು ಕಂಡುಹಿಡಿದ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ ಭಾರತಿಯ ವಿಜ್ಞಾನಿಗಳಲ್ಲಿ ಪ್ರಪ್ರಥಮ ನೊಬೆಲ್ ಪ್ರಶಸ್ತಿ ಪಡೆದವರು ಎಂದು ಹೇಳಿದರು.
ನಂತರ ಅವರು ಪವಾಡ ಬಯಲು ಕಾರ್ಯಕ್ರಮವನ್ನು ಉಪನ್ಯಾಸ ದೊಂದಿಗೆ ಮಕ್ಕಳಿಗೆ ವಿವರಣೆ ನೀಡುವ ಮೂಲಕ ಮೌಡ್ಯತೆ ಮತ್ತು ಮೂಢನಂಬಿಕೆಗಳ ಕುರಿತು ವಿವಿಧ ರೀತಿಯ ಪವಾಡಗಳನ್ನು ಮಾಡಿದರು. ಕರ್ ಕ್ರಮದ ಮುಖ್ಯ ಅತಿಥಿಗಳಾಗಿ ರಾಯಚೂರು ತಾಲ್ಲೂಕು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾವುತರಾವ್ ಬರೂರ ತಾಲೂಕು ಕೋಶಾಧ್ಯಕ್ಷ ದೇವೇಂದ್ರ ಕಟ್ಟಿಮನಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯ ಗುರು ಗೋವಿಂದಪ್ಪ ವಹಿಸಿ ಮಾತನಾಡಿದರು. ಶಾಲೆಯ ಇಕೋಕ್ಲಬ್ ಉಸ್ತುವಾರಿ ಹಾಗೂ ವಿಜ್ಞಾನ ಶಿಕ್ಷಕಿ ಅನಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಶಾಲೆಯ ಶಿಕ್ಷಕಿ ಪದ್ಮ ಕೆ ಅವರು ಎಲ್ಲರನ್ನೂ ಸ್ವಾಗತಿಸಿದರು ಕೊನೆಯಲ್ಲಿ ಶಿಕ್ಷಕರು ವಿಜಯ್ ಕುಮಾರ್ ವಂದಿಸಿದರು.