ಮುದ್ದೇಬಿಹಾಳ ;ಬಿಜೆಪಿ ಜನಾಕ್ರೋಶ ಯಾತ್ರೆಯ ಎರಡನೇ ಹಂತಹ ಹೋರಾಟ ವಿಜಯಪುರ ಜಿಲ್ಲೆಯಲ್ಲಿ ಏ 17 ಗುರುವಾರದಂದು ನಡೆಯಲಿದ್ದು ಈ ಜನಾಕ್ರೋಶ ಯಾತ್ರೆಗೆ ಮುದ್ದೇಬಿಹಾಳ ಮತಕ್ಷೇತ್ರದಿಂದ 10 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು ಈ ಯಾತ್ರೆ ಯಾವ ರಾಜಕೀಯ ದುರುದ್ದೇಶದಿಂದ ಮಾಡುತ್ತಿಲ್ಲ ಕಾಂಗ್ರೆಸ್ ಸರಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಬೆಲೆ ಏರಿಕೆ ಮಾಡಿ ಜನರ ಬದುಕು ದುಸ್ತರಮಾಡಿದ್ದಕ್ಕಾಗಿ ಈ ಜನಾಕ್ರೋಶ ಯಾತ್ರೆ ಮಾಡಲಾಗುತ್ತಿದೆ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಯಶಸ್ವಿಯಾಗಲಿದೆ ಈ ಜನಾಕ್ರೋಶ ಯಾತ್ರೆ ಮುಗಿಯುವದರೂಳಗೆ ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗಲಿದೆ ಕಾಂಗ್ರೆಸ್ ಅಧಿಕಾರದ ಕುರ್ಚಿ ಅಲುಗಾಡಲಿದೆ ಎಂದರು.
ಬಿಜೆಪಿ ಪಕ್ಷ ಅತ್ಯಂತ ಬಲಿಷ್ಠ ಪಕ್ಷವಾಗಿದೆ ಜಿಲ್ಲೆಯ ಪ್ರತಿ ಭೂತಮಟ್ಟದ ಒಟ್ಟು ಪದಾಧಿಕಾರಿಗಳು 20 ಸಾವಿರ ಜನರಿದ್ದಾರೆ ಈ 20 ಸಾವಿರ ಪದಾಧಿಕಾರಿಗಳು ಪ್ರತಿಯೊಬ್ಬರು 5 ಜನರನ್ನು ಓರ್ವ ಮಹಿಳೆ, ದಲಿತ ಹಿಂದುಳಿದ, ರೈತ ಹಾಗೂ ಓರ್ವ ಯುವಕನನ್ನು ಕರೆತರಬೇಕು ಇದು ಪಕ್ಷದ ಆದೇಶವಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರಕಾರ ಪೂಳ್ಳು ಭರವಸೆ ನೀಡಿದೆ ಅಂಗನವಾಡಿ, ಆಶಾ ಕಾರ್ಯಕರ್ತೆರಿಗೆ ನೀಡಿದ ಭರವಸೆ ಈಡೇರಿಸಿಲ್ಲಾ ನೀರಾವರಿ, ಬಿತ್ತನೆ ಬೀಜ ದುಬಾರಿ, ಕಿಸಾನ್ ಸನ್ಮಾನ ರಾಜ್ಯ, ಯೋಜನೆ ರದ್ದು, ವಿದ್ಯುತ್ ದರ ಏರಿಕೆ, ಜನನ ಮರಣ ಪತ್ರ, ಡಿಸೆಲ್ ಪೆಟೋಲ್, ಹಾಲು, ಸರಾಯಿ, ರೇಷನ್ ಕಾರ್ಡ್ ರದ್ದತಿ ಸೇರಿದಂತೆ ಕಾಂಗ್ರೆಸ್ ಸರಕಾರ ಎಲ್ಲದರ ಮೇಲೆ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕ ನಾಶಮಾಡಿದೆ ಟ್ಯಾಕ್ಸ್ ವಿಧಿಸುವುದನ್ನು ಕೈ ಬಿಟ್ಟಿಲ್ಲವೆಂದು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ೪೦% ಸರಕಾರದ ಆರೋಪ ಕುರಿತು ತನಿಖೆಯಲ್ಲಿ ಈ ಆರೋಪದಲ್ಲಿ ಹುರುಳಿಲ್ಲವೆಂಬ ಸತ್ಯ ಬಹಿರಂಗಗೂಂಡಿದೆ ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಧ್ವನಿ ಎತ್ತುತ್ತಿದ್ದಾರೆ ರಾಜು ಕಾಗೆ ಅನುದಾನ ನೀಡದೆ ಇದ್ದರೆ ವಿಧಾನ ಸಭೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಹೇಳಿಕೆ ನೀಡಿದರು ಮುದ್ದೇಬಿಹಾಳ ಶಾಸಕ ನಾಡಗೌಡರು ಅಭಿವೃದ್ಧಿ ಗೆ ಅನುದಾನ ನೀಡದೆ ಇದ್ದರೆ ರಾಜಕೀಯದಿಂದ ದೂರವಾಗುವ ಹೇಳಿಕೆ ನೀಡಿದರು ಅದರಂತೆ ಬಿ ಆರ್ ಪಾಟೀಲ್ ಹೇಳಿಕೆ ನೀಡಿದರು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ನಂ೧ ರಲ್ಲಿ ಇದೆ ಎಂದು ಹೇಳಿಕೆ ನೀಡಿದ್ದಾರೆ; ಎ.ಎಸ್ ಪಾಟೀಲ್ ನಡಹಳ್ಳಿ ಮಾಜಿ ಶಾಸಕರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ತಾಲೂಕಾ ಅಧ್ಯಕ್ಷ ಜಗದೀಶ್ ಪಂಪಣ್ಣವರ, ಬಿಜೆಪಿ ಹಿರಿಯ ಮುಖಂಡರಾದ ಹೇಮರೆಡ್ಡಿ ಮೇಟಿ,ಎಂ ಎಸ್ ಪಾಟೀಲ್ , ಗಂಗಾಧರರಾವ ನಾಡಗೌಡ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ್, ಬಿ ಆರ್ ಪಾಟೀಲ್, ಶಂಕರಗೌಡ ಶಿವಣಗಿ, ಪ್ರೇಮಸಿಂಗ್ ಚವ್ಹಾಣ, ಮಲ್ಲಿಕಾರ್ಜುನ ತಂಗಡಗಿ, ಜಗದೀಶ್ ಪಂಪಣ್ಣನವರ ಸೋಮನಗೌಡ ಬಿರಾದಾರ ಕವಡಿಮಟ್ಟಿ,
ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ,ಸಂಗಮ್ಮ ದೇವರಳ್ಳಿ,
ಗಿರೀಶಗೌಡ ಪಾಟೀಲ್ ಮುರಾಳ, ಸಿದ್ದರಾಜ ಹೊಳಿ,
ರಾಜಶೇಖರ ಹೊಳಿ, ವಿಜಯಕುಮಾರ್ ಬಡಿಗೇರ, ಎಂ ಎಸ್ ಮುದ್ನೂರ, ಶ್ರೀ ಶೈಲ್ ರೂಡಗಿ, ಸಂಜಯ ಬಾಗೇವಾಡಿ, ಸುಭಾಷ್ ಕಾಳಗಿ, ರೇಖಾ ಕೊಂಡಗೂಳಿ, ಸೇರಿದಂತೆ ಪುರಸಭೆ ಸದಸ್ಯರು ಬಿಜೆಪಿ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು.