ಮುದ್ದೇಬಿಹಾಳ | ಶಾಸಕ ಬಸನಗೌಡ ಉಚ್ಚಾಟನೆ ಖಂಡಿಸಿ ಬೃಹತ್ ಪ್ರತಿಭಟನೆ..
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಖಂಡಿಸಿ ಯತ್ನಾಳ ಅಭಿಮಾನಿ ಬಳಗ, ತಾಲೂಕು ಪಂಚಮಸಾಲಿ ಸಮಾಜದ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಬನಶಂಕರಿ ದೇವಸ್ಥಾನದಿಂದ ಇಂದಿರಾಗಾAಧಿ ವೃತ್ತ, ಬಜಾರ್ ಮಾರ್ಗವಾಗಿ ಯತ್ನಾಳ ಪರ ಘೋಷಣೆ ಕೂಗುತ್ತ, ಕೇಸರಿ ಶಾಲು, ಟೋಪಿ ಧರಿಸಿದ್ದ ಅಭಿಮಾನಿಗಳು ಯತ್ನಾಳರ ಭಾವಚಿತ್ರ ಹಿಡಿದು, ಹಲಗೆ ಬಾರಿಸುತ್ತ, ಅಲ್ಲಲ್ಲಿ ಲಂಬಾಣ ಗರ ಕುಣ ತದೊಂದಿಗೆ ಮುಖಂಡರ ನೇತೃತ್ವದಲ್ಲಿ ಬಸವೇಶ್ವರ ವೃತ್ತಕ್ಕೆ ಬಂದು ಬಹಿರಂಗ ಸಭೆ ನಡೆಸಿ ಅಂಬೇಡ್ಕರ್ ವೃತ್ತದಿಂದ ರಾಣ ಚನ್ನಮ್ಮ ವೃತ್ತಕ್ಕೆ ಆಗಮಿಸಿ ರ‍್ಯಾಲಿ ಮುಕ್ತಾಯಗೊಳಿಸಿದರು.
ಯತ್ನಾಳರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ವೃತ್ತದಲ್ಲಿ ೪೦ ನಿಮಿಷಗಳವರೆಗೆ ಬಹಿರಂಗ ಸಭೆ ನಡೆಸಿ ಮುಖಂಡರು ಮಾತನಾಡಿದ್ದರಿಂದ ದಟ್ಟಣೆ ಉಂಟಾಗಿ ವಾಹನ ಸವಾರರು, ಪ್ರಯಾಣ ಕರು ಉರಿಬಿಸಿಲಲ್ಲಿ ಪರದಾಡಿದರು. ಪೊಲೀಸರು ಪರ್ಯಾಯ ಮಾರ್ಗದ ಮೂಲಕ ತಂಗಡಗಿ, ಆಲಮಟ್ಟಿ ರಸ್ತೆ ಭಾಗದ ದಟ್ಟಣೆ ನಿಭಾಯಿಸಿದರು. ಆದರೆ ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಬಂದ ವಾಹನಗಳು ಮುಂದೆ ಹೋಗಲಾಗದೆ ಅದರಲ್ಲಿದ್ದ ಪ್ರಯಾಣ ಕರು ಸಾಕಷ್ಟು ಹೈರಾಣಾಗಿ ಶಾಪ ಹಾಕಿದರು. ತಾಳಿಕೋಟೆ, ಮಿಣಜಗಿಯಲ್ಲಿ ಮಾಡಿದಂತೆ ಇಲ್ಲೂ ಯಡಿಯೂರಪ್ಪ, ವಿಜಯೇಂದ್ರ, ನಡಹಳ್ಳಿ ಫೋಟೊ ಅವಮಾನಗೊಳಿಸಿ, ಬೆಂಕಿ ಹಚ್ಚಿದರೂ ಪೊಲೀಸರು ತಡೆಯಲಿಲ್ಲ. ಇಂಥದ್ದನ್ನು ತಡೆಯುವಂತೆ ಬಿಜೆಪಿ ಮುದ್ದೇಬಿಹಾಳ ಮಂಡಲದವರು, ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ್ದ ಮನವಿ, ದೂರು ಪ್ರಯೋಜನಕ್ಕೆ ಬರದಂತಾಯಿತು. ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ನೇತೃತ್ವದಲ್ಲಿ ವಿವಿಧೆಡೆಯಿಂದ ಬಂದಿದ್ದ ಪೊಲೀಸರು ಭದ್ರತೆ ಒದಗಿಸಿದ್ದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಸಾರ್ವಜನಿಕರು ಮಾತನಾಡಿಕೊಂಡರು.
ಅಭಿಮಾನಿ ಬಳಗದ ಮುಖಂಡರಾದ ಸ್ವಾಮಿ ವಿವೇಕಾನಂದ ಬ್ರಿಗೇಡ್ ಅಧ್ಯಕ್ಷ ರಾಘವ ಅಣ ್ಣಗೇರಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಸಮಿತಿ ಮುಖಂಡ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ರಾಣ ಚನ್ನಮ್ಮ ಯುವ ಘಟಕದ ತಾಲೂಕಾಧ್ಯಕ್ಷ ರವಿ ಕಮತ್, ಕಾಶಿಬಾಯಿ ರಾಂಪೂರ, ವಿಕ್ರಮ್ ಓಸ್ವಾಲ್, ಸಿ.ಪಿ.ಸಜ್ಜನ, ಎಂ.ಡಿ.ಕುAಬಾರ, ದೇವೇಂದ್ರ ವಾಲಿಕಾರ, ಅರವಿಂದ ಕಾಶಿನಕುಂಟಿ, ಸತೀಶ ಕುಲಕಣ ð, ಧೂಳಪ್ಪ ಟಕ್ಕಳಕಿ ರಕ್ಕಸಗಿ, ಮಂಜುನಾಥ ಪಾಟೀಲ ಬಸರಕೋಡ, ಸಿದ್ದು ಹೆಬ್ಬಾಳ ಕುಂಟೋಜಿ, ಶ್ರೀಶೈಲ ಮರೋಳ ತಂಗಡಗಿ, ರವಿ ಗೂಳಿ ಆಲೂರ, ಸುರೇಶ ಪಾಟೀಲ ಢವಳಗಿ, ರಾಜೂಗೌಡ ಗೌಡರ, ಉದಯ ರಾಯಚೂರ, ವೀರೇಶ ಹಡಲಗೇರಿ, ಸಂಗಮೇಶ ಹಾರಿವಾಳ, ಶಂಕರ ಹಡಪದ, ಮಹಾಂತೇಶ ಹಡಪದ, ಬಾಬು ಸೂಳಿಭಾವಿ, ಬಸವರಾಜ ಗೋನಾಳ, ಶರಣಗೌಡ ಬೂದಿಹಾಳ, ಶರಣು ಸಾಲವಾಡಗಿ, ವಿನೋದ ವಾಂಗಿ, ವೀರೇಶ ಬಲದಿನ್ನಿ, ಸಚಿನ್ ಚಿನ್ನಾಪುರ, ಶೆಟ್ಟಪ್ಪ ರಕ್ಕಸಗಿ, ಅಮರೇಶ ಕೋಳೂರ, ವೀರೇಶ ಢವಳಗಿ, ರಮೇಶ ಬೆಲ್ಲದ, ದೀಪಕ್ ಚಲವಾದಿ ಮಡಿಕೇಶ್ವರ, ನಾಗೇಶ ಭಜಂತ್ರಿ, ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಸಮಾಜಗಳ ಸದಸ್ಯರು ಪಾಲ್ಗೊಂಡಿದ್ದರು.
ಯತ್ನಾಳ ಪರ, ನಡಹಳ್ಳಿ ವಿರುದ್ಧ ವಾಕ್ಸಮರ
ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಘವ ಅಣ ್ಣಗೇರಿ, ಬಸನಗೌಡ ಪಾಟೀಲ ನಾಗರಾಳಹುಲಿ, ಎಂ.ಎಸ್.ರುದ್ರಗೌಡ, ಅರವಿಂದ ಕೊಪ್ಪ, ಪ್ರಭುಗೌಡ ದೇಸಾಯಿ ಅವರು ಯತ್ನಾಳರ ಉಚ್ಛಾಟನೆಗೆ ಆಕ್ರೋಶ ವ್ಯಕ್ತಪಡಿಸಿ ಯತ್ನಾಳರ ಉಚ್ಛಾಟನೆ ಹಿಂದುತ್ವ, ಹಿಂದುಗಳಿಗೆ ಅವಮಾನ ಮಾಡಿದಂತಾಗಿದೆ. ಉಚ್ಛಾಟನೆಯ ನಂತರವೇ ಹಿಂದು ಹುಲಿ ಯತ್ನಾಳರ ಶಕ್ತಿ ಎಂಥದ್ದು ಅನ್ನೋದು ಬಹಿರಂಗಕ್ಕೆ ಬಂದಿದೆ. ಅಪ್ಪ, ಮಗನ ಆಡಳಿತ ಕೊನೆಗೊಂಡ ನಂತರ ಯತ್ನಾಳರು ಮರಳಿ ಪಕ್ಷಕ್ಕೆ ಗೌರವಯುತವಾಗಿ ಸೇರ್ಪಡೆಯಾಗುವುದು ಖಚಿತ. ಉಚ್ಛಾಟಿಸಿದವರು ಯತ್ನಾಳರ ಶಕ್ತಿ ಅರಿತುಕೊಳ್ಳಬೇಕು ಎಂದರು. ಇದೇ ವೇಳೆ ಬಿಜೆಪಿಯ ಕೇಂದ್ರ ನಾಯಕರಿಗೆ ಕಿವಿಮಾತು ಹೇಳುವುದರ ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯತ್ನಾಳರನ್ನು ಇಲಿ ಎಂದು ಕರೆದದ್ದಕ್ಕಾಗಿ ಮಾಜಿ ಶಾಸಕ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಿರುದ್ಧ ವಾಕ್ಸಮರವನ್ನೇ ನಡೆಸಿದರು.
ಪಂಚಮಸಾಲಿ ಮುಖಂಡ, ಚಿಂತಕ ಅರವಿಂದ ಕೊಪ್ಪ ಅವರು ಬಹಿರಂಗ ಸಭೆಯಲ್ಲಿ ಕಟುವಾಗಿ ಮಾತನಾಡುತ್ತ ಮಾಜಿ ಶಾಸಕ ನಡÀಹಳ್ಳಿಯವರು ಹಿಂದೊಮ್ಮೆ ಪಂಚಮಸಾಲಿ ಗುರುಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಯೊಂದನ್ನು ಪ್ರಸ್ತಾಪಿಸಿ ನೀವು ಪಂಚಮಸಾಲಿ ಸಮಾಜಕ್ಕೆ ಚುಟುಕಿ ಕೊಡೊ ದಗದಾ ಮಾಡಿದಿರಿ ಅಂತAದ್ರ ನಿಮ್ಮ ಕುತಿಗಿ ಕಟ್ ಮಾಡೋ ಕೆಲಸಾ ನಾವು ಮಾಡ್ತೀವಿ ಅನ್ನೋ ಹಿಂಸಾತ್ಮಕ, ಪ್ರಚೋದನಾತ್ಮಕ ಮಾತುಗಳನ್ನಾಡಿ ವಿವಾದ ಮೈಮೇಲೆಳೆದುಕೊಂಡರು.
ನಡಹಳ್ಳಿ ನನ್ನ ಮೇಲೆ ನೂರು ಕೇಸು ಹಾಕಿದರೂ ಅಂಜೋ ಮಗ ನಾನಲ್ಲ. ನನ್ನ ಜೀವ ಇರುವವರೆಗೂ ಯತ್ನಾಳರು ಎಲ್ಲಿರುತ್ತಾರೋ ನಾನೂ ಅಲ್ಲೇ ಇರುತ್ತೇನೆ. ಯತ್ನಾಳರಿಗೆ ಯಾರೇ ಅವಮಾನ ಮಾಡಿದರೂ ನಾನು ಅಂಥವರ ವಿರುದ್ಧ ಸಿಡಿದೇಳುತ್ತೇನೆ.
–ಪ್ರಭುಗೌಡ ದೇಸಾಯಿ(ಮಡಿಕೇಶ್ವರ), ಮಾಜಿ ಉಪಾಧ್ಯಕ್ಷ, ಜಿಲ್ಲಾ ಪಂಚಾಯತ್, ವಿಜಯಪುರ.
ಮುದ್ದೇಬಿಹಾಳ: ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ರಾಘವ ಅಣ್ಣಿಗೇರಿ ಮಾತನಾಡಿದರು. ಪ್ರಭುಗೌಡ ದೇಸಾಯಿ, ಎಂ.ಎಸ್.ರುದ್ರಗೌಡ, ಅಮರೇಶ ಗೂಳಿ, ಅರವಿಂದ ಕೊಪ್ಪ, ಬಸನಗೌಡ ಪಾಟೀಲ, ಯತ್ನಾಳ ಅಭಿಮಾನಿಗಳು ಇದ್ದಾರೆ.




















