ಮೋದಿಜಿ ಜನ್ಮದಿನ ಪ್ರಯುಕ್ತ್ ಲಿಂಬೆ ನಾಡಿನಲ್ಲಿ ಯಾವುಲ್ಲಾ ವಿಶೇಷ ಕಾರ್ಯಕ್ರಮ..!
ಇಂಡಿ : ಪ್ರಧಾನಿ ನರೇಂದ್ರ ಮೋದಿ ಜಿ ಜನ್ಮ ದಿನದ ನಿಮತ್ಯವಾಗಿ ಲಿಂಬೆನಾಡಿನಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಸೆಪ್ಟೆಂಬರ್ 17 ರ ನರೇಂದ್ರ ಮೋದಿ ಜನ್ಮದಿನದಿಂದ ಅಕ್ಟೋಬರ್ 2 ಗಾಂಧಿ ಜಯಂತಿ ಯವರಿಗೆ ಒಟ್ಟು 15 ದಿನಗಳವರೆಗೆ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ವಭಾವಿ ಸಭೆಯಲ್ಲಿ ಹೇಳಿದರು.
ಪಟ್ಟಣದ ಭಾರತೀಯ ಜನತಾ ಪಾರ್ಟಿ ಮಂಡಲ ಕಾರ್ಯಾಲಯದಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತಾನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ, ಸಸಿನೆಡುವ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಮ, ಜೀವರಕ್ಷಕ ಲಸಿಕಾ ಅಭಿಯಾನ, ಪ್ರಧಾನಿ ನರೇಂದ್ರ ಮೋದಿ ಜಿ ಅವರ ಜೀವನ ಚರಿತ್ರೆ, ರಕ್ತದಾನ ಶಿಬಿರ ನಡೆಯುವು. ಜೊತೆಗೆ ಕಮಲೋತ್ಸವ ಕಾರ್ಯಕ್ರಮ, ಫಲಾನುಭವಿಗಳ ಸಭೆ, ಅರಳಿಮರ ನೆಡುವುದು, ಅಮೃತ ಸರೋವರ ಕಾರ್ಯಕ್ರಮ ಖಾದಿ ಉತ್ಸವ ಹೀಗೆ ದಿನಾಂಕ 17 – ರಿಂದ ಅಕ್ಟೋಬರ್ 2 ರ ವರೆಗೆ ಮಂಡಲ ಮತ್ತು ಮೋರ್ಚಾಗಳು ಹಾಗೂ ಪ್ರಕೋಷ್ಠಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳಲ್ಲಿ, ಬೂತ್ ಮಟ್ಟದವರೆಗೆ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯಿಂದ ಆಗಮಿಸಿದ ಮಂಡಲ ಪ್ರಭಾರಿ ರಾಜು ಪೂಜಾರಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿ ಹೇಳಿ ಮತ್ತು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದರ್, ಸಿದ್ದಲಿಂಗ ಹಂಜಗಿ, ಶೀಲವಂತ್ ಉಮರಾಣಿ, ಅನಿಲ್ ಜಮಾದಾರ್ , ಮುತ್ತು ದೇಸಾಯಿ, ಪುಟ್ಟಗೌಡ್ ಪಾಟೀಲ, ಶಂಕರಗೌಡ ಪಾಟೀಲ, ಬುದ್ದುಗೌಡ ಪಾಟೀಲ್, ಶ್ರೀನಿವಾಸ್ ಕಂದಗಲ್, ಅನಿಲ್ ಗೌಡ ಬಿರಾದಾರ್, ವಿಜಯಲಕ್ಷ್ಮಿ ರೂಗಿಮಠ, ಸುನಂದ ವಾಲಿಕಾರ, ಸುನಂದ ಗಿರಣಿವಡ್ಡರ, ಸಲಿಮ್ ವಾಲಿಕರ್, ರಮೇಶ್ ಧರೆನವರ, ವಿನೋದ ಚವ್ವಾಣ, ಕಾಶಿನಾಥ ನಾಯಿಕೋಡಿ, ಶ್ರೀಶೈಲ್ ಮಧರಿ, ಶಾಂತು ಕಂಬಾರ್, ವಿನೋದ್ ಚೌವ್ಹಾಣ, ಅದೃಷ್ಟಪ್ಪ ವಾಲಿ, ಸಚಿನ್ ಬೋಳೇಗಾವ್, ಕುಮಾರ್ ರಾಥೋಡ್, ಅಣ್ಣಪ್ಪ ಮದರಿ, ಜಟ್ಟು ಮರಡಿ, ಶ್ರೀಮಂತ ಮೊಗಲಾಯಿ, ಮುತ್ತುಗೌಡ ಪಾಟೀಲ, ಆರ್ ಡಿ ಪಾಟೀಲ, ಧರ್ಮು ಮದರಕಂಡಿ, ಅಶೋಕ ಅಕಲಾದಿ, ಮೌನೇಶ್ ಬಡಿಗೇರ, ಉದಯ ಮಠ, ಶಿವಯೋಗಿ ರೋಗಿಮಠ, ಸಂಗಪ್ಪ ಬಾನಿಕೋಲ, ಶ್ರೀಶೈಲ್ ಬಿರಾದಾರ, ರಾಮಸಿಂಗ್ ಕನ್ನೊಳ್ಳಿ ಮತ್ತು ಮಾಧ್ಯಮ ಸಂಚಾಲಕ ರಾಜಶೇಖರ್ ಯರಗಲ್ ಉಪಸ್ಥಿತಿರು.