ಇಂಡಿ : ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ ಹೀಗೆ ಹಲವಾರು ಚುನಾವಣೆ ಕಾರ್ಯ ಚಟುವಟಿಕೆಗಳನ್ನು ಮಕ್ಕಳಿಗೆ ಜಾಗೃತಿ ಮಂಡಿಸಲಾಯಿತು. ಹೌದು ೧ ರಿಂದ ೧೦ನೇ ವರ್ಗದ ಮಕ್ಕಳಿಂದ ಮತದಾನ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆಗೆ ಇತರೆ ಸಚಿವರ ಆಯ್ಕೆ ಮಾಡಲಾಯಿತು.
ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಅಡಿಯಲ್ಲಿ ಬರುವ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ ಆಂಗ್ಲ ಮಾದ್ಯಮ
ಶಾಲೆಯಲ್ಲಿನ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ.
ಶಾಲೆಯ ವಿವಿಧ ಚಟುವಟಿಕೆಳ ಸಾಂಸ್ಕೃತಿಕ, ಕ್ರೀಡಾ,
ಶಾಲೆ ಸ್ವಚ್ಛತೆ, ಊಟ ಇನ್ನಿತರ ಜವಾಬ್ದಾರಿ ತೆಗೆದುಕೊಂಡು ಅದರಲ್ಲಿನ ನ್ಯೂನತೆಗಳನ್ನು
ಮುಖ್ಯ ಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು
ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಗಿದೆ. ಅಲ್ಲದೇ ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು, ಚುನಾವಣೆ ಮತ್ತು ಸಂಸತ್ ರಚನೆ ಉದ್ದೇಶವಾಗಿದೆ. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ಶಾಲಾ ಸಂಸತ್ ಚುನಾವಣೆ ಗುರಿಯಾಗಿದೆ.
ಮಕ್ಕಳೇ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಮೊದಲ
ಬಾರಿಗೆ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದು ಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು.
ಪ್ರಜಾ ಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು. ಸಂಸತ್ ಹೇಗಿರುತ್ತದೆ.? ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್
ರಚನೆ ಮೂಲಕ ಎಲ್ಲದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ
ಪಡೆದರು. ಮತದಾನಕ್ಕೆ ಒಂದು ದಿನ ಮುಂಚೆ ನಾಮಪತ್ರ, ಪ್ರಚಾರ ನಡೆಯಿತು. ಮಂಗಳವಾರ ಮಕ್ಕಳಿಂದ ಮತದಾನ ನಡೆಯಿತು. ಮತಪತ್ರ ನೀಡುವಿಕೆ, ಶಾಯಿ ಹಚ್ಚುವಿಕೆ, ಮತ ಒತ್ತುವುದು, ಸಹಿ ನಿಜವಾದ ಚುನಾವಣೆಯನ್ನೇ ನೆನೆಪಿಸಿದವು. ನೂರಾರು ವಿದ್ಯಾರ್ಥಿಗಳು ತಾಸು ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಗುಪ್ತ ಮತದಾನ ಮಾಡಿದರು.
ನಂತರ ಫಲಿತಾಂಶವೂ ಪ್ರಕಟಗೊಳಿಸಲಾಯಿತು. ವಿ.ಜಿ. ಕಲ್ಮನಿ ಹಾಗೂ ಶ್ರೀದೇವಿ ಕಲ್ಮನಿ, ಚುನಾವಣೆಯ ಮುಖ್ಯಾಧಿಕಾರಿಗಳಾಗಿದರು. ೬ ಜನ ಮತಗಟ್ಟೆ ಅಧಿಕಾರಿಗಳು, ಒಬ್ಬ ಸೆಕ್ಟರ್ ಆಫೀಸರ್ ಆಗಿ ಶಿಕ್ಷಕರು ಮಕ್ಕಳ ಚುನಾವಣೆಯನ್ನು ನಿಭಾಯಿಸಿದ್ದರು.
ಕನ್ನಡ ಮಧ್ಯಮ ವಿಭಾಗದಲ್ಲಿ ಪ್ರಧಾನಿಯಾಗಿ ಹುಸೇನಿ
ಮುಲ್ಲಾ, ಉಪಪ್ರಧಾನಿಯಾಗಿ ಶ್ರವಣಕುಮಾರ ನೆರಕಿ
ಹಾಗೂ ಸಮರ್ಥ ಗೋಳಸಾರ (೪ನೇವರ್ಗ), ರಾಧಿಕಾ
ಹೊನಮೋರೆ (೪ನೇವರ್ಗ), ನಾಗೇಶ ಕೊಪ್ಪಾ
(೫ನೇವರ್ಗ), ತಸ್ಮೀಯಾ ಚೌದರಿ (೫ನೇವರ್ಗ), ಕಲ್ಯಾಣಿ
ಡಂಗಿ (೬ನೇವರ್ಗ), ಅಕ್ಷತಾ ಸಾಲೋಟಗಿ (೬ನೇವರ್ಗ),
ಶ್ರವಣಕುಮಾರ ನೆರಕಿ (೭ನೇವರ್ಗ), ಆನಂದ ಪೂಜಾರಿ
(೮ನೇವರ್ಗ), ಕೋಮಲ ಕುಂಬಾರ (೮ನೇವರ್ಗ), ಅವಿನಾಶ ನೆರಕಿ (೯ನೇವರ್ಗ), ತೃಪ್ತಿ ನಟೀಕಾರ (೯ನೇವರ್ಗ),
ಆಂಗ್ಲ ಮಾಧ್ಯಮದಲ್ಲಿ ಪ್ರಧಾನಿಯಗಿ ಅಕ್ಷತಾ
ಕಲ್ಮನಿ(೯ನೇವರ್ಗ), ಅಭಯ ಕಲ್ಮನಿ (೪ನೇವರ್ಗ),
ನಾಗೇಶ ಬಿರಾದಾರ (೫ನೇವರ್ಗ), ಗಂಗಾಧರ ಗೌರ
(೬ನೇವರ್ಗ), ಸೃಷ್ಠಿ ಕಲ್ಮನಿ (೭ನೇವರ್ಗ), ಹುನ್ನೂರಸಿದ್ದ
ವಾಲಿಕಾರ (೮ನೇವರ್ಗ) ಆಯ್ಕೆಯಾಗಿದ್ದು.
ಸುನಿಲ ವಿ.ಆರ್, ಸಚಿನ್ ಅಡಿಗುಂಡಿ ಸಹಾಯಕ ಚುನಾವಣಾಧಿಕಾರಿ, ಶಿಕ್ಷಕರಾದ ಶಿವಾನಂದ ಕಲ್ಮನಿ, ತುಕಾರಾಮ ಚವ್ಹಾಣ, ಜಯಪ್ರಭು, ಪರಮೇಶ ಲಾಳಸಂಗಿ ರಿಟರ್ನಿಂಗ ಅಧಿಕಾರಿಗಳಾಗಿ, ಜೆ.ಎ.
ಬಿರಾದಾರ, ಎಸ್.ಎಂ. ಭಾಷಗಿ, ಬಿ.ಕೆ. ಉಕಲಿ, ರಾಜೇಶ್ವರಿ ಗೌಡ, ಅನಿತಾ ಗೌಡ, ಗಿರಜಾ ಬಾಗೇವಾಡಿ, ಎಸ್.ಎಸ್. ತೇಲಿ, ಜಾನ್ ಎಸ್, ಥಾಮಸ್
ಎನ್, ರಾಮ ಚವ್ಹಾಣ, ಆಶ್ಯಾನ ಪಿ, ಪ್ರಕಾಶ ಕಲ್ಮನಿ, ಲಕ್ಕಪ್ಪ ಕರಜಗಿ ಇದ್ದರು.