ಗ್ರಾಮಗಳ ಅಭಿವೃದ್ದಿಗೆ ಮೊದಲ ಆಧ್ಯತೆ –
ಶಾಸಕ ಯಶವಂತರಾಯಗೌಡ
ಇಂಡಿ : ಗ್ರಾಮಗಳ ಸಮಗ್ರ ಅಭಿವೃದ್ದಿಯೇ ಕಾಂಗ್ರೆಸ್
ಸರಕಾರದ ಮೂಲ ಮಂತ್ರ, ಹೀಗಾಗಿ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದೆಂದು ಶಾಸಕ
ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಹತ್ತಿರ
ಜೋಡಗುಡಿಯಲ್ಲಿ ಗ್ರಾಮೀಣ ಕುಡಿಯುವ ನೀರು
ಸರಬರಾಜು ಮತ್ತು ಗ್ರಾ.ಪಂ ತಡವಲಗಾ ಸಂಯುಕ್ತ ಆಶ್ರಯದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಇಂಡಿ, ಬಸವನ ಬಾಗೇವಾಡಿ ಮತ್ತು
ವಿಜಯಪುರ ತಾಲೂಕು ಸೇರಿದಂತೆ ಐದು
ಪುರಸಭೆಗಳ ಕುಡಿಯುವ ನೀರು ಪೂರೈಸುವ
₹ 1432 ಕೋಟಿ ಯೋಜನೆಯ ಇಂಡಿ ತಾಲೂಕಿನ
ಅಡಿಯಲ್ಲಿ ಬರುವ ಇಂಡಿ ತಾಲೂಕಿನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ
ಎಂಬ ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ಪ್ರತಿ
ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವದು. ಮತ್ತು ಸರಕಾರದ ಯೋಜನೆ ಗಳನ್ನು ಅರ್ಹ ಫಲಾನುಭವಿಗಳ ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಭರವಸೆ ನೀಡಿದರು.
ಈ ಕಾಮಗಾರಿ ಮುಗಿದ ನಂತರ ತಾಲೂಕಿನ ಎಲ್ಲ
ಗ್ರಾಮಗಳಿಗೆ ಕುಡಿಯುವ ನೀರುಪೂರೈಕೆಯಾಗುತ್ತದೆ. ಬಹುಹಳ್ಳಿ ಯೋಜನೆಯ ಮುಂಚೆ ಕುಡಿಯುವ ನೀರಿನ ತೊಂದರೆ ಇತ್ತು. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಬಂದ ನಂತರ ಕುಡಿಯುವ ನೀರಿನ ಯೋಜನೆ ಸ್ವಲ್ಪ ತಪ್ಪಿಸಿದಂತಾಗಿದೆ ಮತ್ತು ಈ ಯೋಜನೆ ಪೂರ್ಣಗೊಂಡ ನಂತರ ನೀರಿನ ಬವಣೆ ಸಂಪೂರ್ಣ ತಪ್ಪಿಸಬಹುದು ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಮಾತನಾಡಿದರು. ಸಾನಿಧ್ಯ ವಹಿಸಿದ ಶಿವಪೂರದ ಪರಮಾನಂದ ಪೂಜ್ಯರು,ಗ್ರಾ.ಪಂ ಅಧ್ಯಕ್ಷ ರಮೇಶ
ಹೊಸಮನಿ, ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ, ಮಳಸಿದ್ದಪ್ಪ ಬ್ಯಾಳಿ, ರಾಜು ಬೆನಕನಹಳ್ಳಿ, ಸುಭಾಷ ಹಿಟ್ನಳ್ಳಿ, ಚಂದ್ರಶೇಖರ ರೂಗಿ, ಡಾ|| ರಮೇಶ ಪೂಜಾರಿ, ಜಿ.ಪಂ ಎಇಇ ಎಸ್.ಆರ್. ರುದ್ರವಾಡಿ, ಗುತ್ತಿಗೆದಾರ ಶ್ರೀನಿವಾಸ ಮತ್ತಿತರಿದ್ದರು.