ಐತಿಹಾಸಿಕ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಜೋಡಿಸುವ ರಾಜ್ಯ ಹೆದ್ದಾರಿ ಕೆಟ್ಟಿರುವ ಬಗ್ಗೆ ಸದನದಲ್ಲಿ ಶಾಸಕ ಪಾಟೀಲರಿಂದ ಪ್ರಶ್ನೆ..!
ಇಂಡಿ : ಐತಿಹಾಸಿಕ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಜೋಡಿಸುವ ರಾಜ್ಯ ಹೆದ್ದಾರಿ ಲಿಂಗಸೂಗರ-ಶಿರಡೋಣ ಮತ್ತು ಪಂಢರಪುರ-ಗಾಣಗಾಪೂರಕ್ಕೆ ಸರಿಯಾಗಿ ಇಲ್ಲದೆ ಇರುವುದು ಸರಕಾರದ ಗಮನಕ್ಕೆ ಇದಿಯೇ..? ಮಹಾರಾಷ್ಟ್ರ, ಆಂದ್ರ ಪ್ರದೇಶದ ಕರ್ನಾಟಕ ಸೇರಿದಂತೆ ಸಾವಿರಾರು ಭಕ್ತಾಧಿಗಳು ದರ್ಶನಕ್ಕೆ ಬರುವ ಪ್ರವಾಸಿಗರ ಸಂಕಷ್ಟದ ಬಗ್ಗೆ ಶಾಸಕ ಯಶವಂತರಾಗೌಡ ಪಾಟೀಲ ಪರಿಸ್ಥಿತಿ ಏನು ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳ್ಳಿ ಅವರಿಗೆ ಸದನದಲ್ಲಿ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತಿರಿಸಿದ ಸಚಿವರು, ಮಹಾರಾಷ್ಟ್ರದಲ್ಲಿರುವ ಪಂಢರಪೂರ ಮತ್ತು ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಲ್ಲಿರುವ ಗಾಣಗಾಪೂರ (ದೇವಲಗಾಣಗಾಪೂರ) ಆ ಪ್ರದೇಶದಲ್ಲಿ ಪ್ರಸಿದ್ಧ ಯಾತ್ರಾ ಸ್ಥಳಗಳಾಗಿದ್ದು, ಈ ಎರಡು ಯಾತ್ರಾ ಸ್ಥಳಗಳಿಗೆ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಬರುತ್ತಾರೆ. ಸದರಿ ಯಾತ್ರಾ ಸ್ಥಳಗಳಿಗೆ ಶಿರಾಡೋಣ ಲಿಂಗಸೂರು ರಾಜ್ಯ ಹೆದ್ದಾರಿ-41 ಒಂದು ಪ್ರಮುಖ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ಸದರಿ ರಾಜ್ಯ ಹೆದ್ದಾರಿಯು ವಿಜಯಪೂರ ಜಿಲ್ಲೆಯಲ್ಲಿ 0.00 ರಿಂದ 174.00 ಕಿ.ಮೀ. ರವರೆಗೆ ಹಾದುಹೋಗುತ್ತಿದ್ದು, ಅದರ ಉದ್ದ ಕಿ.ಮೀ 174.00 ಉದ್ದವಿರುತ್ತದೆ. ಸದರಿ ರಸ್ತೆಯು ಕರ್ನಾಟಕದ ಚಡಚಣ ತಾಲ್ಲೂಕಿನ ಮಹಾರಾಷ್ಟ್ರದ ಗಡಿಯಿಂದ ಪ್ರಾರಂಭಗೊಂಡು ರಾಯಚೂರು ತಾಲ್ಲೂಕಿನ ಲಿಂಗಸೂರಿನಲ್ಲಿ ಅಂತ್ಯಗೊಳ್ಳುತ್ತದೆ. ಪಂಢರಾಪೂರ ಮತ್ತು ಗಾಣಗಾಪೂರ ಸಂದರ್ಶಿಸುವ ಭಕ್ತಾಧಿಗಳಿಗೆ ಮಹಾರಾಷ್ಟ್ರ ಗಡಿಯಿಂದ ಇಂಡಿ ಪಟ್ಟಣದ ವರೆಗೆ ಸಂಪರ್ಕಿಸುವ ಸಂಪರ್ಕ ರಸ್ತೆಯಾಗಿರುತ್ತದೆ. ಇಂಡಿಯಿಂದ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ-34 ಗಾಣಗಾಪೂರದ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುತ್ತದೆ.
ಸದರಿ 174.00 ಕಿ.ಮೀ. ಉದ್ದದಲ್ಲಿ 21.87 ಕಿ.ಮೀ. ರಸ್ತೆಯು ಹಾಳಾಗಿದ್ದು, ಪ್ರಸಕ್ತ ವರ್ಷದ 2024-25 ರ ಅಪೆಂಡಿಕ್ಸ್- ಇ ಯೋಜನೆಯಡಿ 2.50ಕಿ.ಮೀ. ಹಾಳಾದ ರಸ್ತೆಯನ್ನು ಅನುಮೋದನೆಯಾಗಿರುತ್ತದೆ. ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ಪುಗತಿಯಲ್ಲಿರುತ್ತದೆ. ಇನ್ನುಳಿದ 19.37ಕಿ.ಮೀ ರಸ್ತೆಯನ್ನು ಅನುದಾನದ ಲಭ್ಯತೆ ಮೇರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಬಾಕಿ ಉಳಿದ 152.13 ಕಿ.ಮೀ. (ఒವ್ಹರ್ ಲ್ಯಾಪ್) ಹಾಗೂ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದಂತೆ) ಯೋಗ್ಯವಾಗಿರುತ್ತದೆ. ಉದ್ಯದ ರಸ್ತೆ ಸಂಚಾರಕ್ಕೆಗಾಣಗಾಪೂರ ಯಾತ್ರಾ ಸ್ಥಳ ಸಂಪರ್ಕಿಸುವ ಇನ್ನೊಂದು ರಾಜ್ಯ ಹೆದ್ದಾರಿ-34 ಔರಾದ ಸದಾಶಿವಗಢ ರಸ್ತೆಯು ವಿಜಯಪುರ ಜಿಲ್ಲೆಯಲ್ಲಿ 232.54 ಕಿ.ಮೀ. ರಿಂದ 369.76 ಕಿ.ಮೀ ವರೆಗೆ ಒಟ್ಟು (137.22) ಒಟ್ಟು ಉದ್ದದ ಪೈಕಿ 14.58ಕಿ.ಮೀ. ರಸ್ತೆ ಹಾಳಾಗಿದ್ದು, 2.00 ಕಿ.ಮೀ. ಉದ್ದದ ರಸ್ತೆಯನ್ನು ಸಿ.ಆರ್‌ಎಫ್. ಹಾಗೂ 4.50 ಕಿ.ಮೀ ಉದ್ದದ ರಸ್ತೆಯನ್ನು ಎಸ್.ಎಚ್.ಡಿ.ಪಿ. ಹಂತ-5 ಘಟ್ಟ-1 ಯೋಜನೆಯಡಿ ರಸ್ತೆಯ ಸರಪಳಿ 268.00 ರಿಂದ 269.00 ಕಿಮೀ ಮತ್ತು 272.00 ರಿಂದ 277.00 ಕಿ.ಮೀ ರವರಗೆ ಆಯ್ದ ಭಾಗಗಳಲ್ಲಿ ರೂ.1500.00 ಲಕ್ಷಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪುಗತಿಯಲ್ಲಿದೆ. 8.58 ಕಿ.ಮೀ ರಸ್ತೆಯನ್ನು ಅನುದಾನದ ಲಭ್ಯತೆಯ ಮೇರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಬಾಕಿ ಉಳಿದ 122.64 ಕಿ.ಮೀ. (ఒವ್ಹರ್ ಲ್ಯಾಪ್ ಹಾಗೂ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದಂತೆ) ಉದ್ದದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿರುತ್ತದೆ.
ಸದರಿ ರಸ್ತೆಯು ತಾತ್ವಿಕವಾಗಿ ಹೆದ್ದಾರಿಯನ್ನಾಗಿ 2016 ರಲ್ಲಿ ರಾಷ್ಟ್ರೀಯ ತಾತ್ವಿಕ ಅನುಮೋದನೆಗೊಂಡಿದ್ದು, ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ಸಿ.ವಿ.ಕಾಂಡ್ ಸಂಯೋಜಕರನ್ನು ನೇಮಿಸಲಾಗಿತ್ತು. ಸದರಿ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಪ್ರಾದೇಶಿಕ ಕಛೇರಿ ಭೂ-ಸಾರಿಗೆ ಮಂತ್ರಾಲಯ, ಬೆಂಗಳೂರು ಇವರಿಗೆ ಕೇಂದ್ರ ಕಛೇರಿ ಪತ್ರ 2021 ರಲ್ಲಿ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.