ಅಂಗನವಾಡಿ ಕಾರ್ಯಕರ್ತೆರಿಗೆ ಸ್ಮಾರ್ಟ್ ಫೋನ್ ವಿತರಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು: ಮಕ್ಕಳ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಪಾತ್ರ ಹಿರಿದಾದದ್ದು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕಪಯೋಗಿ ಇಲಾಖೆಯ ವಸತಿಗೃಹ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ ಇವರ ವತಿಯಿಂದ ಏರ್ಪಡಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಮಕ್ಕಳ ಪಾಲಿಗೆ ಎರಡನೇ ತಾಯಿ ಇದ್ದಾಗೆ ಪೋಷಕರು ತಮ್ಮ ದಿನನಿತ್ಯದ ಕಾರ್ಯದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಾರೆ. ಅವರ ಲಾಲನೆ ಪಾಲನೆ ಮಾಡುವುದರ ಜೊತೆಗೆ ಶಾಲಾ ಶಿಕ್ಷಣ ಪೂರ್ವದ ಉತ್ತಮ ಶಿಕ್ಷಣವನ್ನು ನೀಡುವಂತೆ ತಿಳಿಸಿದರು. ಹಾಗಯೇ ಪ್ರಸ್ತುತ್ತ ವಿತರಣೆ ಮಾಡುತ್ತಿರುವ ಸ್ಮಾರ್ಟ್ ಫೋನನ್ನು ಉತ್ತಮ ಸೇವೆ ಕಲ್ಪಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಉಮೇಶ್, ಸಿ.ಡಿ.ಪಿ.ಓ ನಂಜಮಣಿ, ಜಿಲ್ಲಾ ಸಂಯೋಜಕರಾದ ಚೇತನ್ ಕುಮಾರ್, ಮೇಲ್ವಿಚಾರಕಿ ಗೌಶಿಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ